ಇರಾನ್ (Iran) ವರ್ಸಸ್ ಇಸ್ರೇಲ್ ಹಾಗೂ ಅಮೆರಿಕ ನಡುವೆ ಇಷ್ಟು ದಿನ ನಡೆಯುತ್ತಿದ್ದ ಶೀತಲ ಸಮರಕ್ಕೆ ಬಹುತೇಕ ತೆರೆ ಬಿದ್ದಿದೆ. ಇರಾನ್ ಮೇಲೆ ಇಸ್ರೇಲ್, ಅಮೆರಿಕ ಜಂಟಿಯಾಗಿ ಯುದ್ಧ ಸಾರಿದ್ದು 30 ಕಡೆ ದಾಳಿ ನಡೆಸಿದೆ.

ಇರಾನ್ ಕೂಡ ಪ್ರತ್ಯುತ್ತರ ಕೊಟ್ಟಿದ್ದು ದೊಡ್ಡಣ್ಣನ ಸೇನಾ ನೆಲೆಗಳನ್ನೇ ಧ್ವಂಸ ಮಾಡಿದೆ. ಇದೀಗ ಇರಾನ್ನ ಸರ್ವೋಚ್ಛ ನಾಯಕನನ್ನೇ ಮಿತ್ರಪಡೆಗಳು ಹತ್ಯೆಗೈದಿವೆ. ಖಮೇನಿ ಸಾವಿನ ಬೆನ್ನಲ್ಲೇ ಇರಾನ್ ಹೊರ್ಮುಜ್‌ ಜಲಸಂಧಿ ಮುಚ್ಚಿದೆ.

ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ದ ಆರಂಭವಾಗಿದೆ. ಇದು ಜಾಗತಿಕ ಮಾರುಕಟ್ಟೆಯ ಮೇಲೆ ಸಾಕಷ್ಟು ನಕರಾತಕ ಪರಿಣಾಮ ಬೀರಲಿದ್ದು, ಹೊರ್ಮುಜ್‌ ಜಲಸಂಧಿಯಿಂದ ಸರಬರಾಜಾಗುತ್ತಿದ್ದ ತೈಲಕ್ಕೆ ಸದ್ಯಕ್ಕೆ ಬ್ರೇಕ್‌ ಬೀಳಲಿದ್ದು, ತೈಲ ಬೆಲೆ ಹೆಚ್ಚಳವಾಗುವ ಆತಂಕ ಎದುರಾಗಿದೆ.

ವಾಣಿಜ್ಯ ಉದ್ದೇಶದ ಸರಕು ಸಾಗಣೆಗೆ ಹೊರ್ಮುಜ್‌ ಜಲಸಂಧಿಯು ಸುರಕ್ಷಿತವಲ್ಲ ಎಂಬ ಸನ್ನಿವೇಶವನ್ನು ಇರಾನ್‌ ಸೃಷ್ಟಿಸಿದರೆ ಮಾರುಕಟ್ಟೆಗಳ ಮೇಲೆ ಅಗಾಧ ಪರಿಣಾಮ ಉಂಟಾಗುತ್ತದೆ ಎನ್ನಲಾಗಿದೆ. ಈ ಜಲಸಂಧಿಯ ಮೂಲಕ 2025ರಲ್ಲಿ ಪ್ರತಿದಿನ 1.4 ಕೋಟಿ ಬ್ಯಾರೆಲ್‌ ಕಚ್ಚಾ ತೈಲ ಸಾಗಣೆ ಆಗಿತ್ತು. ಇದು ಜಾಗತಿಕವಾಗಿ ಸಮುದ್ರ ಮಾರ್ಗವಾಗಿ ಸಾಗಣೆ ಆಗುವ ಒಟ್ಟು ಕಚ್ಚಾ ತೈಲದ ಅಂದಾಜು ಶೇ 33ರಷ್ಟಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!