
ವೇಣೂರು: ಚಿನ್ನದ ಒಡವೆಗಳನ್ನು ತೊಳೆಯುವ ಮತ್ತು ಪಾಲೀಶ್ ಮಾಡುವುದಾಗಿ ನಂಬಿಸಿ ವಂಚನೆ ನಡೆಸಿದ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಗ್ರಾಮದ ಪಣಿಲಾಜೆ ಎಂಬಲ್ಲಿ ಫೆಬ್ರವರಿ 10, 2026 ರಂದು ಅಪರಿಚಿತ ವ್ಯಕ್ತಿಯೊಬ್ಬನು ಸೇಲ್ಸ್‌ಮ್ಯಾನ್ ರೂಪದಲ್ಲಿ ಮನೆಗೆ ಭೇಟಿ ನೀಡಿ, ಚಿನ್ನದ ಒಡವೆಗಳನ್ನು ಸ್ವಚ್ಛಗೊಳಿಸಿ ಪಾಲೀಶ್ ಮಾಡಿಕೊಡುವುದಾಗಿ ನಂಬಿಸಿದ್ದಾನೆ. ಬಳಿಕ ಚಿನ್ನವನ್ನು ಪಡೆದು ಯಾವುದೋ ದ್ರಾವಣ ಬಳಸಿ ಕರಗಿಸಿ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 13/2026 ಕಲಂ 318(4) ಬಿ.ಎನ್.ಎಸ್. 2023ರಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬಿಹಾರ ರಾಜ್ಯದ ಸುಫೋಲ್ ಜಿಲ್ಲೆಯ ನಿವಾಸಿ ಚಂದನ್ ಕುಮಾರ್ (30) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಯಿಂದ ಸುಮಾರು ₹75,000 ಮೌಲ್ಯದ 7 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ಪತ್ತೆಗಾಗಿ ವೇಣೂರು ಠಾಣಾ ಪೊಲೀಸ್ ಉಪನಿರೀಕ್ಷಕರಾದ ಅಕ್ಷಯ್ ಡವಗಿ ಹಾಗೂ ಶ್ರೀಮತಿ ಓಮನ ಎನ್. ಅವರ ನೇತೃತ್ವದಲ್ಲಿ ಎಎಸ್‌ಐ ವೆಂಕಟೇಶ್ ನಾಯ್ಕ, ಎಎಸ್‌ಐ ಬೆನ್ನಿಚ್ಚನ್, ಹೆಚ್‌ಸಿ 405 ಕೃಷ್ಣ, ಮಹೆಚ್‌ಸಿ 913 ಶ್ರೀಮತಿ ಕೇಶವತಿ, ಪಿಸಿ 2466 ಬಸವರಾಜ್, ಪಿಸಿ 434 ಮೋಹನ್ ಹಾಗೂ ಪಿಸಿ 604 ರಾಕೇಶ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತು.







