ಇರಾನ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ವಿರುದ್ಧ ಯುದ್ಧ ಆರಂಭಿಸಿದ ಬೆನ್ನಲ್ಲೇ, ಇಸ್ರೇಲ್‌ನ( Israel Economy Crisis) ಆಂತರಿಕ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯುವ ಭೀತಿ ಎದುರಾಗಿದೆ. ಇರಾನ್ ಜೊತೆಗಿನ ಈ ಸಂಘರ್ಷದಿಂದಾಗಿ ಇಸ್ರೇಲ್‌ಗೆ ಪ್ರತಿ ವಾರ ಬರೋಬ್ಬರಿ 9.4 ಬಿಲಿಯನ್ ಶೆಕೆಲ್ (ಅಂದಾಜು 21,000 ಕೋಟಿ ಭಾರತೀಯ ರೂಪಾಯಿ) ನಷ್ಟವಾಗುತ್ತಿದೆ ಎಂದು ಇಸ್ರೇಲ್ ಹಣಕಾಸು ಸಚಿವಾಲಯ ಎಚ್ಚರಿಸಿದೆ.

ಯುದ್ಧದ ಭೀತಿಯ ನಡುವೆಯೂ ವ್ಯಾಪಾರ-ವಹಿವಾಟುಗಳನ್ನು ಭಾಗಶಃ ಪುನರಾರಂಭಿಸಲು ಅನುಮತಿ ನೀಡುವಂತೆ ಹಣಕಾಸು ಇಲಾಖೆಯು ಸೇನೆಗೆ ಮನವಿ ಮಾಡಿದೆ.
ಆರ್ಥಿಕ ದಿಗ್ಬಂಧನ: ಹಣಕಾಸು ಇಲಾಖೆಯ ಕಳವಳ

ಇಸ್ರೇಲ್ ಹಣಕಾಸು ಸಚಿವಾಲಯದ ಮಹಾನಿರ್ದೇಶಕ ಇಲಾನ್ ರೋಮ್, ಹೋಮ್ ಫ್ರಂಟ್ ಕಮಾಂಡ್ ಮುಖ್ಯಸ್ಥ ಮೇಜರ್ ಜನರಲ್ ಶೈ ಕ್ಲಾಪ್ಪರ್ ಅವರಿಗೆ ಪತ್ರ ಬರೆದಿದ್ದು, ದೇಶದ ಆರ್ಥಿಕ ಪರಿಸ್ಥಿತಿಯ ಭೀಕರತೆಯನ್ನು ವಿವರಿಸಿದ್ದಾರೆ. ರಕ್ಷಣಾ ನೀತಿಯನ್ನು ಕಾಪಾಡಿಕೊಳ್ಳುವ ಅಗತ್ಯತೆಯ ಬಗ್ಗೆ ನಮಗೆ ಅರಿವಿದೆ, ಆದರೆ ಬೃಹತ್ ಪ್ರಮಾಣದಲ್ಲಿ ಆರ್ಥಿಕತೆಯನ್ನು ಸ್ಥಗಿತಗೊಳಿಸುವುದು ದೇಶಕ್ಕೆ ದೊಡ್ಡ ಹೊರೆಯಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.
ವಾರಕ್ಕೆ 9.4 ಬಿಲಿಯನ್ ಶೆಕೆಲ್ ನಷ್ಟವಾಗುತ್ತಿರುವುದು ಹೇಗೆ..?

ಸದ್ಯ ಇಸ್ರೇಲ್‌ನಲ್ಲಿ ‘ರೆಡ್ ಅಲರ್ಟ್’ ಜಾರಿಯಲ್ಲಿದ್ದು, ಆರ್ಥಿಕತೆಗೆ ಭಾರಿ ಪೆಟ್ಟು ಬೀಳಲು ಪ್ರಮುಖ ಕಾರಣಗಳು ಇಲ್ಲಿವೆ.
ಶಿಕ್ಷಣ ಸಂಸ್ಥೆಗಳ ಬಂದ್: ದೇಶಾದ್ಯಂತ ಶಾಲೆ-ಕಾಲೇಜುಗಳನ್ನು ಮುಚ್ಚಿರುವುದು ಪೋಷಕರ ಕೆಲಸದ ಮೇಲೆ ಪರಿಣಾಮ ಬೀರಿದೆ.
ಕೆಲಸದ ಸ್ಥಳಗಳ ನಿರ್ಬಂಧ: ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಚೇರಿಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.

ರೆಡ್’ ನಿಂದ ‘ಆರೆಂಜ್’ ಮಟ್ಟಕ್ಕೆ ಬದಲಾಯಿಸಲು ಒತ್ತಾಯ

ಸದ್ಯ ಇಸ್ರೇಲ್‌ನಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳಿದ್ದು, ಇದನ್ನು ಆರೆಂಜ್ ಅಲರ್ಟ್ ಮಟ್ಟಕ್ಕೆ ಇಳಿಸಲು ಹಣಕಾಸು ಇಲಾಖೆ ಮನವಿ ಮಾಡಿದೆ.
ರೆಡ್ ಲೆವೆಲ್ ನಷ್ಟ: ವಾರಕ್ಕೆ 9.4 ಬಿಲಿಯನ್ ಶೆಕೆಲ್ (USD 3 Billion).ಆರೆಂಜ್ ಲೆವೆಲ್ ನಷ್ಟ: ವಾರಕ್ಕೆ 4.5 ಬಿಲಿಯನ್ ಶೆಕೆಲ್ (USD 1.5 Billion).
ನಿರ್ಬಂಧಗಳನ್ನು ಸ್ವಲ್ಪ ಸಡಿಲಗೊಳಿಸಿ, ಹತ್ತಿರದಲ್ಲಿ ಬಾಂಬ್ ಶೆಲ್ಟರ್‌ಗಳು ಇರುವ ಕಚೇರಿಗಳಲ್ಲಿ ಕೆಲಸ ಆರಂಭಿಸಲು ಅನುಮತಿ ನೀಡಿದರೆ ಆರ್ಥಿಕ ನಷ್ಟವನ್ನು ಅರ್ಧದಷ್ಟು ಕಡಿಮೆ ಮಾಡಬಹುದು ಎಂಬುದು ರೋಮ್ ಅವರ ವಾದವಾಗಿದೆ.
ಎರಡೂವರೆ ವರ್ಷಗಳ ನಿರಂತರ ಹೊರೆ

ಇಸ್ರೇಲ್ ಆರ್ಥಿಕತೆಯು ಕಳೆದ ಎರಡೂವರೆ ವರ್ಷಗಳಿಂದ ಭದ್ರತಾ ವೆಚ್ಚಗಳ ಏರಿಕೆ ಮತ್ತು ಯುದ್ಧದ ಪರಿಣಾಮಗಳಿಂದಾಗಿ ತೀವ್ರ ಒತ್ತಡದಲ್ಲಿದೆ. ಶನಿವಾರ ಅಮೆರಿಕದೊಂದಿಗೆ ಸೇರಿ ಇರಾನ್ ಮೇಲೆ ದಾಳಿ ನಡೆಸಿದ ನಂತರ, ಇಸ್ರೇಲ್ ರಕ್ಷಣಾ ಪಡೆ ದೇಶಾದ್ಯಂತ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದು ಜನಜೀವನವನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಿದೆ.
ಹೋಮ್ ಫ್ರಂಟ್ ಕಮಾಂಡ್ ಈಗಾಗಲೇ ಈ ನಿರ್ಬಂಧಗಳನ್ನು ಶನಿವಾರ ರಾತ್ರಿಯವರೆಗೆ ವಿಸ್ತರಿಸಿದೆ. ಆದರೆ ಹಣಕಾಸು ಇಲಾಖೆಯು ಗುರುವಾರದಿಂದಲೇ ಭಾಗಶಃ ವಿನಾಯಿತಿ ನೀಡುವಂತೆ ಒತ್ತಡ ಹೇರುತ್ತಿದೆ. ರಕ್ಷಣೆ ಮತ್ತು ಆರ್ಥಿಕತೆ – ಎರಡನ್ನೂ ಸಮತೋಲನ ಮಾಡುವುದು ಈಗ ಇಸ್ರೇಲ್ ಸರ್ಕಾರದ ಮುಂದಿರುವ ಅತಿದೊಡ್ಡ ಸವಾಲಾಗಿದೆ,

Leave a Reply

Your email address will not be published. Required fields are marked *

Join WhatsApp Group
error: Content is protected !!