ಪುತ್ತೂರು: ಪ್ರಸಾದ್ ಡೆಂಟಲ್ ಕ್ಲಿನಿಕ್ ಮತ್ತು ಎಂಡೋಡಾಂಟಿಕ್ ಸೆಂಟರ್‌ನಲ್ಲಿ ದಂತ ಚಿಕಿತ್ಸಾ ಸೇವೆಯ 25 ವರ್ಷಗಳ ಸಾಧನೆ ಅಂಗವಾಗಿ ಲೋಕವಿಕಾಸ ಪ್ರತಿಷ್ಠಾನ ಸಹಯೋಗದಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರವು ಮಾರ್ಚ್ 22ರಂದು ಭಾನುವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪುತ್ತೂರು ದರ್ಬೆಯ ಕೃಷ್ಣ ಆರ್ಕೇಡ್‌ನಲ್ಲಿರುವ ಪ್ರಸಾದ್ ಡೆಂಟಲ್ ಕ್ಲಿನಿಕ್‌ನಲ್ಲಿ ನಡೆಯಲಿದೆ.
ಶಿಬಿರದಲ್ಲಿ ಉಚಿತ ಸಲಹೆ, ದಂತ ತಪಾಸಣೆ, ತಾತ್ಕಾಲಿಕ ಫಿಲ್ಲಿಂಗ್, ಐಒಪಿಎ ಎಕ್ಸ್‌ರೇ, ಹಲ್ಲು ತೆಗೆದುಹಾಕುವ ಚಿಕಿತ್ಸೆ ಹಾಗೂ ಗ್ರಾಸ್ ಸ್ಕೇಲಿಂಗ್ ಸೇವೆಗಳು ನೀಡಲಾಗುತ್ತದೆ.
ಶಿಬಿರದಲ್ಲಿ ಭಾಗವಹಿಸಲು ಪೂರ್ವ ನೋಂದಣಿ ಕಡ್ಡಾಯವಾಗಿದ್ದು, ಆಸಕ್ತರು 9036784744 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!