
ಪುತ್ತೂರು, ಮಾ.9: ಸಾಮೆತ್ತಡ್ಕ ಸಿ.ಟಿ.ಒ ರಸ್ತೆ (ದರ್ಬೆ) ನಿವಾಸಿ ರೊಜಾರಿಯೋ ಓಸ್ವಾಲ್ಡ್ ಸಲ್ದಾನ್ಹಾ ರವರ ಪತ್ನಿ ಹಾಗೂ ಪುತ್ತೂರು ಮಾಯಿದೆ ದೇವಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ (76) ಅವರು ಸೋಮವಾರ ಮಾ.9ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾದರು.
1968ರಲ್ಲಿ ಮಾಯಿದೆ ದೇವಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಆರಂಭಿಸಿದ್ದ ಅವರು, 1984ರಲ್ಲಿ ಮುಖ್ಯ ಶಿಕ್ಷಕಿಯಾಗಿ ಪದೋನ್ನತಿ ಹೊಂದಿದರು. 2007ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.
ಅವರಿಗೆ ಪತಿ ರೊಜಾರಿಯೋ ಓಸ್ವಾಲ್ಡ್ ಸಲ್ದಾನ್ಹಾ , ಪುತ್ರಿ ಜೆನಿಫರ್ (ಅಳಿಯ ಮೆಲ್ವಿನ್ ರಸ್ಕಿನ್ಹಾ), ಪುತ್ರ ಜೋಯಿಸ್ಟರ್ (ಸೊಸೆ ನೊನಿಶಾ ಸಲ್ದಾನ್ಹಾ) ಹಾಗೂ ಮೊಮ್ಮಕ್ಕಳ ನ್ನು ಅಗಲಿದ್ದಾರೆ
ಮೃತದೇಹವನ್ನು ಮಾ.10ರಂದು ಮಧ್ಯಾಹ್ನ 1ರಿಂದ 3ರವರೆಗೆ ದರ್ಬೆಯ ಸಿ.ಟಿ.ಒ ರಸ್ತೆಯ ‘ಒಸ್ಲೀನ್’ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ಬಳಿಕ ಮಧ್ಯಾಹ್ನ 3.30ಕ್ಕೆ ಪುತ್ತೂರಿನ ಎಳ್ಮುಡಿ ಚಾಪೆಲ್‌ನಲ್ಲಿ ಅಂತ್ಯಕ್ರಿಯೆಯ ಪೂಜೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.









