ಪುತ್ತೂರು: ಕೆಮ್ಮಿಂಜೆ ಗ್ರಾಮದ ನೈತಾಡಿ ಬಂಗೇರ ಕುಟುಂಬಸ್ಥರ ಸಾವಿರದೊಂದು ದೈವಗಳ ತರವಾಡು ಮನೆಯಲ್ಲಿ ನಡೆಯುವ ದೈವಗಳ ನೇಮೋತ್ಸವವು ಮಾ.25ರಿಂದ 28ರವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಸುಮಾರು 56 ವರ್ಷಗಳ ಇತಿಹಾಸ ಹೊಂದಿರುವ ಈ ತರವಾಡು ಮನೆಯಲ್ಲಿ ಪ್ರತಿ ವರ್ಷ ನಡೆಯುವ ನೇಮೋತ್ಸವಕ್ಕೆ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಮಾ.25ರಂದು ಬೆಳಿಗ್ಗೆ ಗಣಹೋಮ, ನಾಗತಂಬಿಲ, ಮುಡಿಪುಶುದ್ಧಿ, ಉಳ್ಳಾಕುಲು ದೈವದ ಭಂಡಾರ ತೆಗೆಯುವ ಕಾರ್ಯಕ್ರಮ, ಜಾಗದ ಕಲ್ಲುರ್ಟಿ ನೇಮ ನಡೆಯಲಿದೆ.
ಮಾ.26ರಂದು ಬೆಳಿಗ್ಗೆ ಉಳ್ಳಾಕುಲು ದೈವದ ನೇಮೋತ್ಸವ, ಮಧ್ಯಾಹ್ನ ಅನ್ನಪ್ರಸಾದ ವಿತರಣೆ ನಡೆಯಲಿದೆ. ಸಂಜೆ ರಕ್ತೇಶ್ವರಿ, ಪಿಲಿಚಾಮುಂಡಿ, ಧರ್ಮದೈವ, ವರ್ಣರ ಪಂಜುರ್ಲಿ ಹಾಗೂ ಜಾವತೆ ದೈವಗಳ ಭಂಡಾರ ತೆಗೆಯುವ ಹಾಗೂ ನೇಮೋತ್ಸವ ಕಾರ್ಯಕ್ರಮ ಜರುಗಲಿದೆ.
ಮಾ.27ರಂದು ಕಲ್ಕುಡ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ಹಾಗೂ ಕೊರತಿ ದೈವಗಳ ನೇಮೋತ್ಸವ ನಡೆಯಲಿದೆ.
ಮಾ.28ರಂದು ಬೆಳಿಗ್ಗೆ ಶಿರಾಡಿ ದೈವದ ನೇಮೋತ್ಸವ ಹಾಗೂ ಗುಳಿಗ ದೈವ, ಕೊರಗಜ್ಜ ದೈವಗಳ ನೇಮೋತ್ಸವ ಜರುಗಲಿದೆ.
ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರದ್ಧಾಭಕ್ತಿಯಿಂದ ಪಾಲ್ಗೊಳ್ಳುವಂತೆ ನೈತಾಡಿ ಬಂಗೇರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














