ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬೆ ಗ್ರಾಮದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಕೇರಳ ಮೂಲದ ಯುವತಿ ಏಕಾಏಕಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಶರಣ್ಯ ಜಿ.ಎಸ್. ಎಂಬ ಯುವತಿ ತಡಿಯಂಡಮೋಲ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ ವೇಳೆ ಸಂಪರ್ಕ ಕಡಿತಗೊಂಡಿದ್ದು, ಬಳಿಕ ಕಾಣೆಯಾಗಿದ್ದಾಳೆ. ಶರಣ್ಯ ಖಾಸಗಿ ಹೋಮ್‌ಸ್ಟೇನಲ್ಲಿ ತಂಗಿದ್ದಳು. ಭಾನುವಾರ ಬೆಳಿಗ್ಗೆ ಚಾರಣಕ್ಕೆ ತೆರಳಲು ಮುಂದಾದಾಗ ಹೋಮ್‌ಸ್ಟೇ ಸಿಬ್ಬಂದಿ ಇತರರೊಂದಿಗೆ ಕಳುಹಿಸಿದ್ದರು ಎನ್ನಲಾಗಿದೆ.
ಸಂಜೆಯಾದರೂ ವಾಪಸ್ಸು ಬಾರದ ಹಿನ್ನೆಲೆಯಲ್ಲಿ ಹೋಮ್‌ಸ್ಟೇ ಸಿಬ್ಬಂದಿ ಹಾಗೂ ಸ್ಥಳೀಯರು ಹುಡುಕಾಟ ಆರಂಭಿಸಿದರು. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮಡಿಕೇರಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಂಯುಕ್ತವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಬೆಟ್ಟ ಪ್ರದೇಶದಲ್ಲಿ ಮಳೆ ಹಾಗೂ ಮಂಜು ಇರುವುದರಿಂದ ಶೋಧ ಕಾರ್ಯಕ್ಕೆ ಅಡಚಣೆ ಉಂಟಾಗುತ್ತಿದೆ ಎಂದು ತಿಳಿದುಬಂದಿದೆ. ಯುವತಿಯ ಪತ್ತೆಗಾಗಿ ಶ್ರಮ ಮುಂದುವರಿದಿದೆ.














