ಬಂಟ್ವಾಳ: ತಾಲೂಕಿನ ಕಾಡಬೆಟ್ಟು ಗ್ರಾಮದ ಕೆಳಗಿನ ವಗ್ಗ ನಿವಾಸಿಯಾದ ಆಟೋ ಚಾಲಕ ಮಹಮ್ಮದ್ ರಾಯಿಬ್ (21) ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಯಿಬ್ ವಿವಾಹಿತರಾಗಿದ್ದು, ತಂದೆಯ ಮನೆಯ ಸಮೀಪವೇ ವಾಸವಾಗಿದ್ದರು. ಏಪ್ರಿಲ್ 1ರಂದು ರಾತ್ರಿ ಮದುವೆ ಕಾರ್ಯಕ್ರಮದಿಂದ ತಾಯಿ ಹಾಗೂ ಸಹೋದರಿಯರನ್ನು ಮನೆಗೆ ತಲುಪಿಸಿದ ಬಳಿಕ, ಪ್ರತಿನಿತ್ಯದಂತೆ ತಾತನ ಮನೆಗೆ ತೆರಳಿ ಮಲಗಿದ್ದರೆಂದು ತಿಳಿದುಬಂದಿದೆ.
ಏಪ್ರಿಲ್ 2ರಂದು ಬೆಳಗ್ಗೆ ನಮಾಝ್‌ಗೆ ಎದ್ದ ಅಜ್ಜಿ, ಕೋಣೆಯ ಬಾಗಿಲು ತೆರೆದಿರುವುದನ್ನು ಗಮನಿಸಿ ಪರಿಶೀಲಿಸಿದಾಗ ರಾಯಿಬ್ ಕಾಣೆಯಾಗಿರುವುದು ತಿಳಿದುಬಂದಿದೆ. ಅವರ ಆಟೋ ರಿಕ್ಷಾವೂ ಮನೆಯಿಂದ ಕಾಣೆಯಾಗಿದ್ದು, ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಮಹಮ್ಮದ್ ರಾಯಿಬ್ ಅವರ ತಂದೆ ಅಬ್ದುಲ್ ಲತೀಫ್ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!