ಪುತ್ತೂರು: ತುರ್ತು ಹಾಗೂ ನಿರ್ವಹಣಾ ಕಾಮಗಾರಿಗಳ ನಿಮಿತ್ತ ಏಪ್ರಿಲ್ 4ರಂದು (ಶನಿವಾರ) ಪುತ್ತೂರು ನಗರದ ಕೆಲವು ಭಾಗಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
110/33/11 ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪುತ್ತೂರು ಟೌನ್ ಓಲ್ಡ್ ಫೀಡರ್‌ನಲ್ಲಿ ಪೂರ್ವಾಹ್ನ 10 ಗಂಟೆಯಿಂದ ಅಪರಾಹ್ನ 5.30ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಈ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಕೋರ್ಟ್ ರೋಡ್, ಮಿನಿ ವಿಧಾನಸೌಧ, ಚೇತನಾ ಆಸ್ಪತ್ರೆ, ಪರ್ಲಡ್ಕ, ಬೈಪಾಸ್, ಗೋಳಿಕಟ್ಟೆ, ಕುಂಜೂರು ದೇವಸ್ಥಾನ, ತೆಂಕಿಲ, ಬಪ್ಪಳಿಗೆ, ಬಾಲವನ, ಉರ್ಲಾಂಡಿ, ಸರಕಾರಿ ಆಸ್ಪತ್ರೆ, ಕರ್ಮಲ ಹಾಗೂ ಬೊಳ್ವಾರು ಪರಿಸರದ ಬಳಕೆದಾರರು ಅಗತ್ಯ ಮುನ್ನೆಚ್ಚರಿಕೆ ಕೈಗೊಂಡು ಸಹಕರಿಸುವಂತೆ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!