
ಪುತ್ತೂರು, ಏ.7: ಡಾ. ನಝೀರ್ ಅಹಮದ್ ಕೆ ಅವರ ನೇತೃತ್ವದ ಡಾ.ನಝೀರ್ಸ್ ಡಯಾಬಿಟೀಸ್ ಸೆಂಟರ್ 13ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 9ರಂದು ವಿಶೇಷ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಕಲ್ಲಾರೆದಲ್ಲಿರುವ ಕೇಂದ್ರದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿರುವ ಶಿಬಿರವು ರೋಟರಿ ಕ್ಲಬ್ ಪುತ್ತೂರು ಹಾಗೂ ರೋಟರಾಕ್ಟ್ ಕ್ಲಬ್ ಪುತ್ತೂರು ಸಹಯೋಗದಲ್ಲಿ ಜರುಗಲಿದೆ.
ಈ ಶಿಬಿರದ ವಿಶೇಷ ಆಕರ್ಷಣೆಯಾಗಿ ‘ಸಂಪೂರ್ಣ ದೇಹದ ಕೊಬ್ಬು ಮತ್ತು ಮೆಟಾಬಾಲಿಕ್ ವಿಶ್ಲೇಷಣೆ’ ಪರೀಕ್ಷೆ ವ್ಯವಸ್ಥೆ ಮಾಡಲಾಗಿದೆ. ಕೇವಲ ಎರಡು ನಿಮಿಷಗಳಲ್ಲಿ ದೇಹದ ಕೊಬ್ಬಿನ ಪ್ರಮಾಣ, ಒಳಾಂಗಿಕ ಕೊಬ್ಬು (ವಿಸರಲ್ ಫ್ಯಾಟ್), ಮೆಟಾಬಾಲಿಕ್ ವಯಸ್ಸು ಮತ್ತು ಸ್ನಾಯುಗಳ ಪ್ರಮಾಣ ಸೇರಿದಂತೆ ವಿವಿಧ ಅಂಶಗಳನ್ನು ತಿಳಿದುಕೊಳ್ಳುವ ಅವಕಾಶ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.
ಉಚಿತ ತಪಾಸಣೆಗಳಲ್ಲಿ ರಕ್ತದ ಸಕ್ಕರೆ (GRBS) ಮತ್ತು ಮೂರು ತಿಂಗಳ ಸರಾಸರಿ ಸಕ್ಕರೆ ಮಟ್ಟವನ್ನು ಸೂಚಿಸುವ HbA1c ಪರೀಕ್ಷೆಗಳು ಇರಲಿವೆ. ರಿಯಾಯಿತಿ ದರದಲ್ಲಿ ಲಿಪಿಡ್ ಪ್ರೊಫೈಲ್ ಪರೀಕ್ಷೆ ₹500 ಬದಲು ₹200ಕ್ಕೆ ಹಾಗೂ ಥೈರಾಯ್ಡ್ ಪರೀಕ್ಷೆ ₹430 ಬದಲು ₹100ಕ್ಕೆ ನಡೆಸಲಾಗುತ್ತದೆ.
ಮಧುಮೇಹ ಹಾಗೂ ಮೆಟಾಬಾಲಿಕ್ ಅಸ್ವಸ್ಥತೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಸೀಮಿತ ಅವಕಾಶ ಇರುವುದರಿಂದ ಆಸಕ್ತರು 9481451929 ಸಂಖ್ಯೆಗೆ ಕರೆ ಅಥವಾ ವಾಟ್ಸಪ್ ಮೂಲಕ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವಂತೆ ಕೋರಲಾಗಿದೆ.














