ಉಳ್ಳಾಲ ತಾಲೂಕಿನ ಪಜೀರು ಗ್ರಾಮದ ಅಡ್ಕ ಪ್ರದೇಶದಲ್ಲಿ ಜಾತ್ರೆಗೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯೋರ್ವಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.
ಪಜೀರು ಅಡ್ಕ ನಿವಾಸಿ ಜಗದೀಶ್ ಅವರ ಪುತ್ರಿ ಚೈತನ್ಯ (16) ನಾಪತ್ತೆಯಾದ ವಿದ್ಯಾರ್ಥಿನಿ. ಹರೇಕಳ ರಾಮಕೃಷ್ಣ ಹೈಸ್ಕೂಲ್‌ನಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಆಕೆ, ಪರೀಕ್ಷೆಗಳು ಮುಗಿದ ಹಿನ್ನೆಲೆಯಲ್ಲಿ ಮನೆಯಲ್ಲಿ ಇದ್ದಳು.
ಎಪ್ರಿಲ್ 12ರಂದು ಬೆಳಿಗ್ಗೆ ಗೆಳೆಯರೊಂದಿಗೆ ಪೊಳಲಿ ಜಾತ್ರೆಗೆ ತೆರಳಿದ ಚೈತನ್ಯ, ರಾತ್ರಿ ವರೆಗೂ ಮನೆಗೆ ವಾಪಸ್ಸಾಗಿಲ್ಲ. ಇದರಿಂದ ಆತಂಕಗೊಂಡ ಕುಟುಂಬದವರು ಗೆಳೆಯರು ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಆಕೆಯ ಸುಳಿವು ದೊರಕಿರಲಿಲ್ಲ.
ನಂತರ ಕುಟುಂಬದವರು ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿದ್ಯಾರ್ಥಿನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!