ಪುತ್ತೂರು: ನೆಲ್ಲಿಕಟ್ಟೆ ನಿವಾಸಿ ಶ್ರೀಕಾಂತ್ ಹೆಗ್ಡೆ (39) ಅಲ್ಪಕಾಲದ ಅಸೌಖ್ಯದಿಂದ ಮೇ 20ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಕಳೆದ 11 ವರ್ಷಗಳಿಂದ ದುಬೈಯಲ್ಲಿ ಉದ್ಯೋಗದಲ್ಲಿದ್ದ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಊರಿಗೆ ಆಗಮಿಸಿದ್ದ ಅವರು ಬಳಿಕ ಗುಣಮುಖರಾಗಿ ಮತ್ತೆ ದುಬೈಗೆ ತೆರಳಿದ್ದರು. ಆದರೆ ಕಾಯಿಲೆ ಮರುಕಳಿಸಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ.
ಮೃತರು ತಂದೆ-ತಾಯಿ, ಪತ್ನಿ, ಪುತ್ರಿ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.














