ಪುತ್ತೂರು, ಜೂನ್ 8: ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಿಂಹವನ ನಿವಾಸಿ ಗೋಪಾಲಕೃಷ್ಣ (45) ಅವರು ಕಳೆದ ಮೇ 11ರಿಂದ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಸಾರ್ವಜನಿಕರ ಸಹಕಾರವನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಕೋರಿದ್ದಾರೆ.
ಗೋಪಾಲಕೃಷ್ಣ ಅವರು 2026ರ ಮೇ 11ರಂದು ಸಂಜೆ ಸುಮಾರು 6 ಗಂಟೆಯವರೆಗೆ ತಮ್ಮ ಮನೆಯಲ್ಲಿ ಇದ್ದು, ಬಳಿಕ ಎಲ್ಲಿಗೂ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕುಟುಂಬಸ್ಥರು, ಸಂಬಂಧಿಕರು ಹಾಗೂ ಪರಿಚಿತರಲ್ಲಿ ವಿಚಾರಿಸಿದರೂ ಅವರ ಬಗ್ಗೆ ಯಾವುದೇ ಸುಳಿವು ದೊರಕಿಲ್ಲ ಎಂದು ತಿಳಿದುಬಂದಿದೆ.
ಈ ಕುರಿತು ಅವರ ತಾಯಿ ಗಂಗಮ್ಮ ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 83/2026ರಡಿ ಗಂಡಸು ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಕಾಣೆಯಾದವರ ಚಹರೆ ವಿವರ:
ಹೆಸರು: ಗೋಪಾಲಕೃಷ್ಣ
ವಯಸ್ಸು: 45 ವರ್ಷ
ಲಿಂಗ: ಪುರುಷ
ಎತ್ತರ: 5 ಅಡಿ 5 ಇಂಚು
ಕೂದಲು: ಕಪ್ಪು
ಮೈಬಣ್ಣ: ಗೋಧಿ
ಮುಖದ ಆಕಾರ: ಕೋಲು ಮುಖ
ಮೈಕಟ್ಟು: ಸಪೂರ ಶರೀರ
ಧರಿಸುವ ಉಡುಪು: ಸಾಮಾನ್ಯವಾಗಿ ಲುಂಗಿ, ಪ್ಯಾಂಟ್ ಹಾಗೂ ಶರ್ಟ್
ಮಾತನಾಡುವ ಭಾಷೆಗಳು: ಕನ್ನಡ, ಮರಾಠಿ ಮತ್ತು ತುಳು
ಗೋಪಾಲಕೃಷ್ಣ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ 9480805363, 8277986540 ಅಥವಾ 9901192626 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸಾರ್ವಜನಿಕರು ಹಾಗೂ ಮಾಧ್ಯಮಗಳು ಅವರ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ.






