
ಮಂಡ್ಯ ಜಿಲ್ಲೆಯ ಪೊಲೀಸ್ ಅಧಿಕಾರಿಯ ನವ ವಿವಾಹಿತ ಮಗಳು ಡೆತ್ ನೋಟ್ ಬರೆದಿಟ್ಟು ಮನೆಯಿಂದ ಓಡಿ ಹೋಗಿದ್ದಾಳೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಮಂಡ್ಯದ ಶಂಕರ ನಗರದಲ್ಲಿ ಘಟನೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಂಡ್ಯ ಮಹಿಳಾ ಠಾಣೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ASI) ಮಗಳು ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾಳೆ. ನಾಪತ್ತೆ ಆಗಿರುವ ಗೃಹಿಣಿಯನ್ನು ಅನುಷಾ (24) ಎಂದು ಹೇಳಲಾಗಿದೆ. ಇವರನ್ನು ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಬೆಂಗಳೂರಿನ ಬಿದರಹಳ್ಳಿ ನಿವಾಸ್ ದಿನೇಶ್ ಕುಮಾರ್ ಜೊತೆ ವಿವಾಹ ಮಾಡಿಕೊಡಲಾಗಿತ್ತು.
ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತಿದ್ದ ಅನುಷಾ ಇದೀಗ, ಗಂಡ ದಿನೇಶ್, ನಾದಿನಿ ರಂಜಿನಿ, ಭಾವ ರಾಜೇಶ್ ಹಾಗೂ ಅತ್ತೆ ಕಾಂತಮ್ಮ ನನ್ನ ಸಾವಿಗೆ ಕಾರಣರೆಂದು ಡೆತ್‌ನೋಟ್ ಬೆದಿಟ್ಟಿದ್ದಾರೆ. ಇನ್ನು ಡೆತ್ ನೋಟ್ ಪಕ್ಕದಲ್ಲಿ ತಾನು ಬಳಸುತ್ತಿದ್ದ ಮೊಬೈಲ್ ಹಾಗೂ ಗಂಡ ಕಟ್ಟಿದ್ದ ತಾಳಿಯನ್ನು ಬಿಚ್ಚಿಟ್ಟು ಮನೆಯಿಂದ ನಾಪತ್ತೆ ಆಗಿದ್ದಾರೆ.
ಇನ್ನು ಡೆತ್ ನೋಟ್‌ನಲ್ಲಿ ನಾನು ಒಂದು ಹೆಣ್ಣಾಗಿ ಇಷ್ಟೊಂದು ಅವಮಾನ ಸಹಿಲಾಗಲಿಲ್ಲ. ಅದರಲ್ಲಿಯೂ ನಾನೊಬ್ಬ ಪೊಲೀಸ್ ಅಧಿಕಾರಿ ಮಗಳಾಗಿ ನನಗೆ ನ್ಯಾಯ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.
ನನಗಾದ ಮೋಸ ಯಾರಿಗೂ ಆಗಬಾರದು. ಅಪ್ಪ ನೀವು ಅವರಿಗೆಲ್ಲಾ ಶಿಕ್ಷೆ ಕೊಡಿಸಿ. ನನ್ನನ್ನು ಯಾರೂ ಹುಡುಕಬೇಡಿ. ಅಮ್ಮ, ಅಮ್ಮಾ ಸಾರಿ.. ಉಳಿದ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬರೆದಿದ್ದಾಳೆ. ಇಂದು ಬೆಳಗ್ಗೆ ವೇಳೆ ಈ ಡೆತ್ ನೋಟ್ ಪತ್ತೆಯಾಗಿದ್ದು, ಅನುಷಾಗಾಗಿ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ಆರಂಭಿಸಿದ್ದಾರೆ. ಈ ಘಟನೆಯು ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಗೃಹಿಣಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮಂಡ್ಯ ಪೊಲೀಸ್ ಠಾಣೆಗೆ ಮನವಿ ಮಾಡಲಾಗಿದೆ.







