ಪುತ್ತೂರು, ಜೂ.15: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಪುತ್ತೂರು ಹಾಗೂ ಬೆಳ್ತಂಗಡಿ ಶೋರೂಂಗಳ ವತಿಯಿಂದ ಆಯೋಜಿಸಿದ್ದ ‘ಡೈಮಂಡ್ ಫೆಸ್ಟ್’ ಅಂಗವಾಗಿ ಪುತ್ತೂರು ಶೋರೂಂನಲ್ಲಿ ಭಾನುವಾರ ಲಕ್ಕಿ ಡ್ರಾ ಕಾರ್ಯಕ್ರಮ ನಡೆಯಿತು.
ಮಾರ್ಚ್ 28ರಿಂದ ಮೇ 10ರವರೆಗೆ ನಡೆದ ಡೈಮಂಡ್ ಫೆಸ್ಟ್ ಅವಧಿಯಲ್ಲಿ ವಜ್ರಾಭರಣ ಖರೀದಿಸಿದ ಗ್ರಾಹಕರಿಗೆ ಲಕ್ಕಿ ಡ್ರಾ ಕೂಪನ್‌ಗಳನ್ನು ವಿತರಿಸಲಾಗಿತ್ತು. ಆಯ್ಕೆಯಾದ ಅದೃಷ್ಟಶಾಲಿ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲು ಲಕ್ಕಿ ಡ್ರಾ ನಡೆಸಿ ವಿಜೇತರನ್ನು ಆಯ್ಕೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಂಬಿಕೆ ಮತ್ತು ವಿಶ್ವಾಸದ ಪ್ರತೀಕವಾಗಿ ಮುಳಿಯ ಸಂಸ್ಥೆ ಗುರುತಿಸಿಕೊಂಡಿದ್ದು, ಗ್ರಾಹಕರಲ್ಲಿ ವಿಶೇಷ ಸ್ಥಾನ ಪಡೆದಿದೆ” ಎಂದು ಹೇಳಿದರು.
ಲಕ್ಕಿ ಡ್ರಾದ ಬಂಪರ್ ಬಹುಮಾನವಾದ ಇವಿ ಸ್ಕೂಟರ್‌ನ್ನು ರಕ್ಷಿತಾ ಪೂಜಾರಿ ಗೆದ್ದುಕೊಂಡರು. ಜಾನ್ವಿ ಮನೀಶಿ ಕೊಂಬೆಟ್ಟು ಹಾಗೂ ಅನುಷಾ ವೈ. ಕಾಶಿಬೆಟ್ಟು ಇತರ ಪ್ರಮುಖ ಬಹುಮಾನಗಳಿಗೆ ಭಾಜನರಾದರು.
ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಮಾತನಾಡಿ, “ಗ್ರಾಹಕರ ವಿಶ್ವಾಸ ಮತ್ತು ಪ್ರೀತಿಯೇ ಸಂಸ್ಥೆಯ ಬೆಳವಣಿಗೆಗೆ ಮೂಲ ಕಾರಣವಾಗಿದೆ. ಉತ್ತಮ ಗುಣಮಟ್ಟದ ವಜ್ರಾಭರಣಗಳ ಜತೆಗೆ ವಿಶಿಷ್ಟ ಖರೀದಿ ಅನುಭವ ನೀಡುವ ಉದ್ದೇಶದಿಂದ ಡೈಮಂಡ್ ಫೆಸ್ಟ್ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ನೀಡಿದ ಎಲ್ಲ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುತ್ತೇವೆ” ಎಂದರು.
ಕಾರ್ಯಕ್ರಮದಲ್ಲಿ ಪುತ್ತೂರು ಶಾಖಾ ಪ್ರಬಂಧಕ ರಾಘವೇಂದ್ರ ಪಟೇಲ್, ಬೆಳ್ತಂಗಡಿ ಶಾಖಾ ಪ್ರಬಂಧಕ ಲೋಹಿತ್ ಕುಮಾರ್ ಉಪಸ್ಥಿತರಿದ್ದರು. ವೇಣು ಶರ್ಮಾ ಅವರು ವಜ್ರಾಭರಣಗಳ ವಿಶೇಷತೆ, ಗುಣಮಟ್ಟ ಹಾಗೂ ಮೌಲ್ಯದ ಕುರಿತು ಗ್ರಾಹಕರೊಂದಿಗೆ ಪ್ರಶ್ನೋತ್ತರ ರೂಪದಲ್ಲಿ ಮಾಹಿತಿ ಹಂಚಿಕೊಂಡರು.
ರಾಘವೇಂದ್ರ ಪಟೇಲ್ ಸ್ವಾಗತಿಸಿದರು. ಆನಂದ್ ಕುಲಾಲ್ ವಂದಿಸಿದರು. ಮೃದುಲ ಕಾರ್ಯಕ್ರಮ ನಿರೂಪಿಸಿದರು.







