ಪುತ್ತೂರು :ಇತ್ತೀಚಿನ ದಿನಗಳಲ್ಲಿ ಮದುವೆಯಾದ ಜೋಡಿಗಳು ತಮ್ಮ ವಾಹನಗಳ ನೋಂದಣಿ ಸಂಖ್ಯೆ ಫಲಕದ ಮೇಲೆ ‘ಜಸ್ಟ್ ಮ್ಯಾರೀಡ್’ ಎಂಬ ಫಲಕ ಅಳವಡಿಸಿ ಮೂಲ ನೋಂದಣಿ ಸಂಖ್ಯೆಯನ್ನು ಮುಚ್ಚುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದು ಸಂಚಾರ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ತುರ್ತು ಹಾಗೂ ಕಾನೂನು ಸಂಬಂಧಿತ ಸಂದರ್ಭಗಳಲ್ಲಿ ವಾಹನವನ್ನು ಗುರುತಿಸಲು ತೊಂದರೆಯಾಗುವ ಸಾಧ್ಯತೆ ಇದೆ.ಈ ಕುರಿತು ಹಿಂದೂ ಸಂಘಟನೆಗಳ ಮುಖಂಡ ಅಜಿತ್ ರೈ ಹೊಸಮನೆ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದಿದ್ದರು. ದೂರಿನ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪುತ್ತೂರು ಪೊಲೀಸರು, ಪಟ್ಟಣದಲ್ಲಿ ಸಂಚರಿಸುತ್ತಿದ್ದ ವಾಹನವೊಂದರ ಮೇಲಿದ್ದ ‘ಜಸ್ಟ್ ಮ್ಯಾರೀಡ್’ ಫಲಕವನ್ನು ತೆರವುಗೊಳಿಸಿ, ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.ವಾಹನದ ನೋಂದಣಿ ಸಂಖ್ಯೆಯನ್ನು ಮುಚ್ಚುವ ರೀತಿಯ ಯಾವುದೇ ಫಲಕ, ಸ್ಟಿಕ್ಕರ್ ಅಥವಾ ಅಲಂಕಾರವನ್ನು ಅಳವಡಿಸಬಾರದು ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!