ಬೆಳ್ತಂಗಡಿ: ತಾಲೂಕಿನ ನೆರಿಯ ಗ್ರಾಮದ ನೆರಿಯಕಾಡು ಪ್ರದೇಶದಲ್ಲಿರುವ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಹೆಬ್ಬಲಸು ಮರ ಕಡಿದು ಸಾಗಿಸಲು ಯತ್ನಿಸುತ್ತಿದ್ದ ಪ್ರಕರಣವನ್ನು ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಪತ್ತೆಹಚ್ಚಿದೆ.ಆರ್‌ಎಫ್‌ಒ ತ್ಯಾಗರಾಜ್ ನೇತೃತ್ವದ ಅರಣ್ಯ ಇಲಾಖೆ ತಂಡ ದಾಳಿ ನಡೆಸಿದ ವೇಳೆ, ಅಂಬ್ಲೆ ನಿವಾಸಿ ರಾಜಪ್ಪ ಗೌಡ ಎಂಬಾತ ಹೆಬ್ಬಲಸು ಮರವನ್ನು ಅಕ್ರಮವಾಗಿ ಕಡಿದು ತುಂಡರಿಸುತ್ತಿದ್ದುದು ಬೆಳಕಿಗೆ ಬಂದಿದೆ.ಸ್ಥಳ ಪರಿಶೀಲನೆ ವೇಳೆ ಒಂದು ಹೆಬ್ಬಲಸು ಮರವನ್ನು ಕಡಿದು 40 ಹಲಗೆಗಳು ಹಾಗೂ 3 ಮರದ ದಿಮ್ಮಿಗಳನ್ನಾಗಿ ಮಾಡಿರುವುದು ಪತ್ತೆಯಾಗಿದೆ. ಅಧಿಕಾರಿಗಳು ಮರದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!