ಪುತ್ತೂರು: ಶತಮಾನೋತ್ಸವದ ಹೊಸ್ತಿಲಲ್ಲಿರುವ ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘ ಅಸ್ತಿತ್ವಕ್ಕೆ ಬಂದಿದೆ.ಶಾಲೆಯ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್. ಗೌರವಾಧ್ಯಕ್ಷೆಯಾಗಿ, ಕೆ.ಎ. ಹಮೀದ್ ಕೂರ್ನಡ್ಕ ಅಧ್ಯಕ್ಷರಾಗಿ ಹಾಗೂ ಉದ್ಯಮಿ ದೀಪಕ್ ಮಿನೇಜಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ನಿತಿನ್ ಪಕ್ಕಳ, ಪಿ. ಮಹಮ್ಮದ್ ಅಶ್ರಫ್ ಮುಕ್ವೆ, ಅರ್ಷದ್ ದರ್ಬೆ ಹಾಗೂ ಮನು ರೈ, ಕೋಶಾಧಿಕಾರಿಯಾಗಿ ಮುಖ್ಯಶಿಕ್ಷಕಿ ಐರಿನ್ ವೇಗಸ್, ಜಂಟಿ ಕೋಶಾಧಿಕಾರಿಯಾಗಿ ಸಿಂಚನಾ ಊರುಬೈಲು, ಕಾರ್ಯದರ್ಶಿಯಾಗಿ ಪ್ರದೀಪ್ ಕೆ., ಜಂಟಿ ಕಾರ್ಯದರ್ಶಿಯಾಗಿ ವಿನೋದ್ ಆಚಾರ್ಯ, ಸಂಚಾಲಕರಾಗಿ ಸುಹಾಸ್ ಮರಿಕೆ, ಸಂಘಟನಾ ಕಾರ್ಯದರ್ಶಿಯಾಗಿ ಜನಾರ್ದನ ಪೂಜಾರಿ, ಮಾಧ್ಯಮ ಪ್ರಮುಖರಾಗಿ ಬಿ.ಜಿ. ಜುನೈದ್, ಕ್ರೀಡಾ ಕಾರ್ಯದರ್ಶಿಯಾಗಿ ಸಂದೇಶ್ ರೈ ಸಂಪ್ಯ, ಸಹ ಕ್ರೀಡಾ ಕಾರ್ಯದರ್ಶಿಯಾಗಿ ನವನೀತ್ ಬಜಾಜ್ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಭಿಜಿತ್ ಆಯ್ಕೆಯಾಗಿದ್ದಾರೆ.ಇತ್ತೀಚೆಗೆ ಶಾಲೆಯಲ್ಲಿ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್. ಅವರ ನೇತೃತ್ವದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘವು ಶತಮಾನೋತ್ಸವದ ಅಂಗವಾಗಿ ವಿವಿಧ ಶೈಕ್ಷಣಿಕ, ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!