ಮೂಡುಬಿದಿರೆ: ಬಿಜೆಪಿ ಮೂಲ್ಕಿ–ಮೂಡುಬಿದಿರೆ ಮಂಡಲ ಯುವಮೋರ್ಚಾದಲ್ಲಿ ಸಕ್ರಿಯರಾಗಿದ್ದ ಯುವ ಮುಖಂಡ, ಎಕ್ಕಾರು ನಿವಾಸಿ ಪ್ರತೀಕ್ ಶೆಟ್ಟಿ (39) ಸೆ.22ರಂದು ನಿಧನರಾದರು.ಉದ್ಯಮಿಯಾಗಿದ್ದ ಪ್ರತೀಕ್ ಶೆಟ್ಟಿ ಅವರು ಹಲವು ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಮೂಲ್ಕಿ–ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಯುವ ಮುಖಂಡರಾಗಿ ಗುರುತಿಸಿಕೊಂಡಿದ್ದ ಅವರು, ಜಿಲ್ಲಾ ಬಿಜೆಪಿ ಯುವಮೋರ್ಚಾದಲ್ಲಿಯೂ ಸಕ್ರಿಯರಾಗಿದ್ದರು. ಈ ಹಿಂದೆ ಮಂಡಲ ಯುವಮೋರ್ಚಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!