ಪುತ್ತೂರು, ಸೆ.23: ನಿಯತಕಾಲಿಕ ನಿರ್ವಹಣೆ ಹಾಗೂ ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಸೆ.24ರಂದು ಪುತ್ತೂರು ತಾಲೂಕಿನ ಹಲವೆಡೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.33/11 ಕೆವಿ ಕ್ಯಾಂಪ್ಲೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕ್ಯಾಂಪ್ಲೋ ಫ್ಯಾಕ್ಟರಿ, ಮುಕ್ವೆ, ಮುಂಡೂರು, ಕೆಮ್ಮಿಂಜೆ ಹಾಗೂ ಮುಕ್ರಂಪಾಡಿ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಇದರಿಂದ ಮುಕ್ವೆ, ಮುಂಡೂರು, ಕೆಮ್ಮಿಂಜೆ, ದರ್ಬೆ, ಮುಕ್ರಂಪಾಡಿ, ಕೂರ್ನಡ್ಕ ಹಾಗೂ ಸಂಪ್ಯ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಇದೇ ವೇಳೆ, 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ದರ್ಬೆ, ಪುತ್ತೂರು ಟೌನ್ ಓಲ್ಡ್, ಉಪ್ಪಿನಂಗಡಿ ಎಕ್ಸ್‌ಪ್ರೆಸ್, ಕಾಂಚನ ಹಾಗೂ ವಾಟರ್ ಸಪ್ಪೆ ಫೀಡರ್‌ಗಳಲ್ಲಿಯೂ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.ಇದರಿಂದ ವಾಟರ್ ಸಪ್ಪೆ, ದರ್ಬೆ, ಕೆಎಸ್‌ಆರ್‌ಟಿಸಿ, ನೆಲ್ಲಿಕಟ್ಟೆ, ಕಲ್ಲಾರೆ, ಸಾಮೆತ್ತಡ್ಕ, ಹನುಮಾನ್ ಮಿಲ್, ಅಶ್ವಿನಿ ಸರ್ಕಲ್, ಐಬಿ, ಎಂ.ಟಿ. ರಸ್ತೆ, ಕೊಡಿಪ್ಪಾಡಿ, ಪಡೂರು, ಕಬಕ, ಸೇಡಿಯಾಪು, ಕೋಡಿಂಬಾಡಿ, ಮಠಂತಬೆಟ್ಟು, ಶಾಂತಿನಗರ, ದಾರಂದಕುಕ್ಕು ಹಾಗೂ ಬೆಳ್ಳಿಪ್ಪಾಡಿ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.










