ಪುತ್ತೂರು: ಭಾರಿ ಮಳೆಯಿಂದಾಗಿ ಪುತ್ತೂರು ಸುತ್ತಮುತ್ತ ಹಲವು ಕಡೆ ಮರಗಳು ಬಿದ್ದು ವಿದ್ಯುತ್ ತಂತಿ ಹಾಗೂ ಕಂಬಗಳಿಗೆ ಹಾನಿಯಾಗಿರುವ ಘಟನೆ ಅ.7ರಂದು ನಡೆದಿದೆ.ಬನ್ನೂರು ಜೈನರಗುರಿ, ಹರಡಿ ಸ್ಕೂಲ್ ಬಳಿಯ ಜೋಡುಕಟ್ಟೆ, ಪಡೀಲ್‌ನ ಕನಕದಾಸ ಕಾಲೋನಿ ಹಾಗೂ ಬನ್ನೂರು ಮಾರನಾಡ್ಕ ಸಮೀಪ ಮರಗಳು ಬಿದ್ದು ವಿದ್ಯುತ್ ತಂತಿ ಮತ್ತು ಕಂಬಗಳಿಗೆ ಹಾನಿಯಾಗಿದೆ.ಬನ್ನೂರು ಜೈನರಗುರಿಯಲ್ಲಿ ಗಣೇಶ್ ಆಚಾರ್ಯ ಅವರ ಮನೆಗೆ ತೆರಳುವ ರಸ್ತೆಯಲ್ಲಿ ಮರದ ಕೊಂಬೆ ವಿದ್ಯುತ್ ತಂತಿ ಮೇಲೆ ಬಿದ್ದು ಕಂಬ ಮುರಿದಿದೆ. ಘಟನೆ ಬಳಿಕ ಪವರ್‌ಮ್ಯಾನ್ ಸಂತೋಷ್ ಹಾಗೂ ಸ್ಥಳೀಯರು ಸ್ಥಳಕ್ಕೆ ತೆರಳಿ ಮರ ತೆರವುಗೊಳಿಸಿ, ವಿದ್ಯುತ್ ವ್ಯವಸ್ಥೆ ದುರಸ್ತಿ ಕಾರ್ಯ ಕೈಗೊಂಡರು.ಭಾರಿ ಮಳೆಯಿಂದಾಗಿ ಪುತ್ತೂರು ನಗರ ಹಾಗೂ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಮರಗಳು, ವಿದ್ಯುತ್ ತಂತಿ ಹಾಗೂ ಕಂಬಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ











