ಮಂಗಳೂರು, ಅ. 10: ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ಮಾಡೆಲಿಂಗ್ ಹಾಗೂ ಫೋಟೋಶೂಟ್ ಮಾಡಿಸುವುದಾಗಿ ನಂಬಿಸಿ, ಕಪ್ಪು ಹಣದ ಆಮಿಷವೊಡ್ಡಿ ಮೂಡುಬಿದಿರೆಯ ಯುವ ವೈದ್ಯೆಯೊಬ್ಬರಿಂದ ಲಕ್ಷಾಂತರ ರೂಪಾಯಿ ಹಣ, ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ. ಅಲ್ಲದೆ, ವೈದ್ಯೆಯ ವೈಯಕ್ತಿಕ ದಾಖಲೆಗಳು ಮತ್ತು ಫೋಟೋಗಳನ್ನು ದುರುಪಯೋಗಪಡಿಸಿಕೊಂಡು ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಇನ್‌ಸ್ಟಾಗ್ರಾಂ ಮೂಲಕ ಪರಿಚಯದೂರಿನ ಪ್ರಕಾರ, ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿ ತನ್ನನ್ನು ಡಾ. ಅಶ್ವಿನ್ ಶೆಟ್ಟಿ ಎಂದು ಪರಿಚಯಿಸಿಕೊಂಡಿದ್ದ. ಮಾಡೆಲಿಂಗ್ ಹಾಗೂ ಫೋಟೋಶೂಟ್ ಮಾಡಿಸಿಕೊಡುವುದಾಗಿ ಹೇಳಿ ಯುವ ವೈದ್ಯೆಯ ವಿಶ್ವಾಸ ಗಳಿಸಿದ್ದ. ಬಳಿಕ ಮಂಗಳೂರಿಗೆ ಹಡಗಿನ ಮೂಲಕ ಕಪ್ಪು ಹಣವಿರುವ ಬ್ಯಾಗ್‌ಗಳು ಬರುತ್ತಿದ್ದು, ಅವುಗಳನ್ನು ಪಡೆಯಲು ಮುಂಗಡ ಹಣದ ಅಗತ್ಯವಿದೆ ಎಂದು ಹೇಳಿ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾಯಿಸಿಸಿಕೊಂಡಿದ್ದ ಎನ್ನಲಾಗಿದೆ.ಕೆವೈಸಿ ದಾಖಲೆ ಪಡೆದು ವಂಚನೆಆದಾಯ ತೆರಿಗೆ ಸಮಸ್ಯೆ ಪರಿಹರಿಸುವ ನೆಪದಲ್ಲಿ ಯುವ ವೈದ್ಯೆಯಿಂದ ಗುರುತಿನ ಚೀಟಿ,ಪ್ಯಾನ್ ಕಾರ್ಡ್, ಫೋಟೋಗಳು ಹಾಗೂ ಇತರ ಕೆವೈಸಿ ದಾಖಲೆಗಳನ್ನು ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಪ್ರವೀಣ್ ಶೆಟ್ಟಿ ಎಂಬ ವ್ಯಕ್ತಿ 16 ಗ್ರಾಂ ತೂಕದ ಚಿನ್ನದ ಗಟ್ಟಿ ಹಾಗೂ ವಿಸ್ಕಿ ಮತ್ತು ಬ್ರೀಜರ್ ಮದ್ಯದ ಬಾಟಲಿಗಳನ್ನು ಪಡೆದುಕೊಂಡಿದ್ದಾಗಿ ವೈದ್ಯೆ ಆರೋಪಿಸಿದ್ದಾರೆ. ಅಲ್ಲದೆ, ಸುಮಾರು ₹1.35 ಲಕ್ಷ ಮೌಲ್ಯದ ಐಫೋನ್ ಪ್ರೊ ಮ್ಯಾಕ್ಸ್ ಮೊಬೈಲ್ ಫೋನ್ ಖರೀದಿಸಿ ನೀಡುವಂತೆ ಮಾಡಿದ್ದಾನೆ ಎನ್ನಲಾಗಿದೆ.

ಫೋಟೋ ಮಾರ್ಫ್ ಮಾಡಿ ಬೆದರಿಕೆ

ಯುವ ವೈದ್ಯೆಯ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17ರಂದು ₹50,000 ನಗದು ಹಾಗೂ ಸುಮಾರು 8 ಗ್ರಾಂ ತೂಕದ ಚಿನ್ನದ ಬ್ರೇಸ್ಲೆಟ್ ಪಡೆದುಕೊಂಡಿದ್ದಾನೆ ಎನ್ನಲಾಗಿದೆ.ನಂತರ ಸೆಪ್ಟೆಂಬರ್ 22ರಂದು ಚಾಲಕ ಸಂದೀಪ್ ಕೋಟ್ಯಾನ್ ಮೂಲಕ ಉಡುಪಿಯ ಕಲ್ಯಾಣ್ ಜ್ಯುವೆಲ್ಲರ್ಸ್‌ ಬಳಿ ₹8 ಲಕ್ಷ ನಗದು ಹಣವನ್ನು ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಒಟ್ಟು ₹15.35 ಲಕ್ಷದ ಸೊತ್ತು ವಂಚನೆ ಆರೋಪ

ಮಾಡೆಲಿಂಗ್, ಕಪ್ಪು ಹಣ, ಆದಾಯ ತೆರಿಗೆ ಸಮಸ್ಯೆ ಹಾಗೂ ಬ್ಯಾಂಕ್ ಖಾತೆ ತೆರೆಯುವ ನೆಪದಲ್ಲಿ ಹಂತ ಹಂತವಾಗಿ ವಂಚಿಸಲಾಗಿದೆ ಎಂದು ಯುವ ವೈದ್ಯೆ ಆರೋಪಿಸಿದ್ದಾರೆ. ಒಟ್ಟು ಸುಮಾರು ₹10.20 ಲಕ್ಷ ನಗದು, 32 ಗ್ರಾಂ ಚಿನ್ನಾಭರಣ ಹಾಗೂ ₹1.35 ಲಕ್ಷ ಮೌಲ್ಯದ ಮೊಬೈಲ್ ಫೋನ್ ಸೇರಿದಂತೆ ಸುಮಾರು ₹15.35 ಲಕ್ಷ ಮೌಲ್ಯದ ಸೊತ್ತುಗಳನ್ನು ಪಡೆದುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.ಯುವ ವೈದ್ಯೆಯ ವೈಯಕ್ತಿಕ ದಾಖಲೆಗಳು ಮತ್ತು ಫೋಟೋಗಳನ್ನು ದುರುಪಯೋಗಪಡಿಸಿಕೊಂಡು ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆಯೂ ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!