ಪುತ್ತೂರು: ಪಶುಸಂಗೋಪನಾ ಇಲಾಖೆಯ ವತಿಯಿಂದ 2026-27ನೇ ಸಾಲಿನಲ್ಲಿ ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಉಚಿತವಾಗಿ ದೇಶಿ ಕೋಳಿಮರಿಗಳನ್ನು ವಿತರಿಸುವ ಯೋಜನೆಯಡಿ, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯಡಿ ಪುತ್ತೂರು ತಾಲೂಕಿನಲ್ಲಿ ಒಟ್ಟು 99 ಫಲಾನುಭವಿಗಳಿಗೆ ತಲಾ 20ರಂತೆ ಐದು ವಾರಗಳ ವಯಸ್ಸಿನ ದೇಶಿ/ನಾಟಿ ಕೋಳಿಮರಿಗಳನ್ನು ಉಚಿತವಾಗಿ ವಿತರಿಸುವ ಗುರಿ ಹೊಂದಲಾಗಿದೆ.ಫಲಾನುಭವಿಗಳ ವರ್ಗವಾರು ಗುರಿ ಹೀಗಿದೆ: ಪರಿಶಿಷ್ಟ ಜಾತಿ 17, ಪರಿಶಿಷ್ಟ ಪಂಗಡ 7, ಹಿಂದುಳಿದ ವರ್ಗ 32 ಹಾಗೂ ಸಾಮಾನ್ಯ ವರ್ಗದ 43 ಫಲಾನುಭವಿಗಳು. ಒಟ್ಟು 99 ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.ಅಗತ್ಯ ದಾಖಲೆಗಳುಆಸಕ್ತ ಮಹಿಳೆಯರು ಪಶುಸಂಗೋಪನಾ ಇಲಾಖೆಯ ಕಚೇರಿಯಿಂದ ಅರ್ಜಿ ಪಡೆದು, ಅಗತ್ಯ ದಾಖಲೆಗಳೊಂದಿಗೆ ದ್ವಿಪ್ರತಿಯಲ್ಲಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಎರಡು ಭಾವಚಿತ್ರಗಳು, ಆಧಾರ್ ಕಾರ್ಡ್‌ನ ಎರಡು ಪ್ರತಿಗಳು, ಬಿಪಿಎಲ್ ಪಡಿತರ ಚೀಟಿಯ ಎರಡು ಪ್ರತಿಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಫಲಾನುಭವಿಗಳು ಆರ್‌ಡಿ ಸಂಖ್ಯೆ ಹೊಂದಿರುವ ಜಾತಿ ಪ್ರಮಾಣಪತ್ರದ ಎರಡು ಪ್ರತಿಗಳನ್ನು ಸಲ್ಲಿಸಬೇಕು.ಅರ್ಜಿ ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಪಶುಸಂಗೋಪನಾ ಇಲಾಖೆಯ ಕಚೇರಿಯನ್ನು ಸಂಪರ್ಕಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಧರ್ಮಪಾಲ ಕೆ. ತಿಳಿಸಿದ್ದಾರೆ.











