ಬೆಳ್ತಂಗಡಿ : ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಶಿಪಟ್ನ ಗ್ರಾಮದ ಉರ್ದು ಗುಡ್ಡೆಯಲ್ಲಿ ನಡೆದಿದೆ.

ಉರ್ದು ಗುಡ್ಡೆ ನಿವಾಸಿಗಳಾದ ನೋಣಯ್ಯ ಪೂಜಾರಿ (63) ಬೇಬಿ (46) ಮೃತರು.

ದಂಪತಿ ಮನೆಯ ಸಮೀಪ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೋಣಯ್ಯ ಪೂಜಾರಿ ಕಳೆದ ಐದು ವರ್ಷಗಳಿಂದ ತಲೆನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಪತ್ನಿ ಬೇಬಿ ಮಕ್ಕಳಿಲ್ಲದ ಕೊರಗನಲ್ಲಿದ್ದರು ಎನ್ನಲಾಗಿದೆ.

ನೋಣಯ್ಯ ಪೂಜಾರಿಯವರ ಮೊದಲ ಪತ್ನಿ ಹತ್ತು ವರ್ಷದ ಹಿಂದೆ ಸಾವನ್ನಪ್ಪಿದ್ದರು. ಬಳಿಕ ಬೇಬಿ ಅವರನ್ನು ವಿವಾಹವಾಗಿದ್ದರು. ಮೊದಲನೆ ಪತ್ನಿಗೆ ಐದು ಗಂಡು ಮಕ್ಕಳಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!