ಪುತ್ತೂರು: ಇಲ್ಲಿನ ಮಂಜಲ್ಪಡ್ಪು ಬಳಿ ಆಟೋ ರಿಕ್ಷಾ ಹಾಗೂ ಬಲೆನೋ ಕಾರಿನ ನಡುವೆ ಅಪಘಾತ ಸಂಭವಿಸಿ, ಆಟೋ ಚಾಲಕ ಗಾಯಗೊಂಡ ಘಟನೆ ಭಾನುವಾರ ನಡೆಯಿತು.

ಆಟೋ ಚಾಲಕನ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಪುತ್ತೂರಿನಿಂದ ನೆಹರುನಗರ ಕಡೆ ಸಾಗುತ್ತಿದ್ದ ರಿಕ್ಷಾ ಹಾಗೂ ಉರ್ಲಾಂಡಿ ಒಳ ರಸ್ತೆಯಿಂದ ಬರುತ್ತಿದ್ದ ಬಲೆನೋ ಕಾರಿನ ನಡುವೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!