ಮೈಸೂರು, ಸೆಪ್ಟೆಂಬರ್ 30: ಖ್ಯಾತ ಪ್ರಸೂತಿ ತಜ್ಞೆ ಡಾ.ಜಿ.ಎಸ್.ವಿದ್ಯಾಧರೆ ( D. GS Vidhyadhare ) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಮೈಸೂರಿನ (Mysore) ಆರ್‌ಟಿಒ ವೃತ್ತದ ಬಳಿಯ ಡೆನ್ಮಾರ್ ಅಪಾರ್ಟ್ಮೆಂಟ್ನ ಮನೆಯಲ್ಲಿ ಇಂದು (ಸೆ.30) ಬೆಳಿಗ್ಗೆ ವೈದ್ಯೆಯ ಶವ ಪತ್ತೆಯಾಗಿದೆ. ವಿದ್ಯಾಧರೆ ಅವರು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ವೈದ್ಯೆ ಆಗಿದ್ದರು. ಡಾ. ವಿದ್ಯಾಧರೆ ಅವರ ಪತಿ ಡಾ.ಷಣ್ಮುಖ ಕೆ.ಆರ್.ಆಸ್ಪತ್ರೆಯಲ್ಲಿ ಪ್ರಖ್ಯಾತ ಮೂಳೆ ತಜ್ಞರಾಗಿದ್ದಾರೆ.

ಮಂಡ್ಯದ ಗೌಡಗೆರೆಯ ಡಾ.ವಿದ್ಯಾಧರೆ ಅವರನ್ನು ಡಾ.ಷಣ್ಮುಖ ಅವರು 14 ವರ್ಷದ ಹಿಂದೆ ವಿವಾಹವಾಗಿದ್ದರು. ವೈದ್ಯೆ ವಿದ್ಯಾಧರೆ ಅವರು ರವಿವಾರ ತವರು ಮನೆಯಿಂದ ಮೈಸೂರಿನಲ್ಲಿನ ಗಂಡನ ಮನೆಗೆ ಬಂದಿದ್ದರು. ಆದರೆ, ಡಾ.ವಿದ್ಯಾಧರೆ ಬೆಳಿಗ್ಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹಲವು ವರ್ಷಗಳಿಂದ‌ ಡಾ.ಷಣ್ಮುಖ ಮತ್ತು ಡಾ.ಜಿ.ಎಸ್.ವಿದ್ಯಾಧರೆ ನಡುವೆ ವಿರಸ ಇತ್ತು ಎಂಬ ಆರೋಪ ಕೇಳಿಬಂದಿದೆ.

ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಡಾ.ಷಣ್ಮುಖ ಕುಟುಂಬದ ವಿರುದ್ಧ ಡಾ. ವಿದ್ಯಾಧರೆ ತಾಯಿ ಆರೋಪ ಮಾಡಿದ್ದಾರೆ. ಡಾ. ವಿದ್ಯಾಧರೆ ಪೋಷಕರು ಮೈಸೂರಿನ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಸಿದ್ದಾರೆ. ಲಕ್ಷ್ಮೀಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಡಿಸಿಪಿ ಜಾನ್ನವಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದರು.

Leave a Reply

Your email address will not be published. Required fields are marked *

Join WhatsApp Group
error: Content is protected !!