ಇಸ್ರೇಲ್: ಮಧ್ಯಪ್ರಾಚ್ಯ ದೇಶಗಳಲ್ಲಿ (Middle East) ಯುದ್ಧದ (War) ಭೀತಿ ಜೋರಾಗಿದೆ. ಅದರಲ್ಲೂ ಇರಾನ್ ಹಾಗೂ ಇಸ್ರೇಲ್ ನಡುವೆ ಸಂಘರ್ಷ ಜೋರಾಗಿದೆ. ಇಂದು ಇಸ್ರೇಲ್ (Israel) ಮೇಲೆ ಇರಾನ್ (Iran) ಭೀಕರವಾಗಿ ದಾಳಿ ನಡೆಸಿದೆ. ಇಸ್ರೇಲ್ ಮೇಲೆ 400 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು (Missile attack) ಇರಾನ್ ಉಡಾಯಿಸಿದೆ.

 

ಇರಾನ್‌ನ ಪ್ರಮುಖ ನಗರಗಳಿಂದ ಇಸ್ರೇಲ್‌ ಗುರಿಯಾಗಿಸಿ, ಕ್ಷಿಪಣಿ ದಾಳಿ ನಡೆಸಲಾಗಿದೆ. ಇರಾನ್‌ನ ಪ್ರಮುಖ ನಗರಗಳಾದ ಇಸ್ಫಹಾನ್, ತಬ್ರಿಜ್, ಖೋರಮಾಬಾದ್, ಕರಾಜ್ ಮತ್ತು ಅರಾಕ್‌ಸೇರಿದಂತೆ ಹಲವೆಡೆಯಿಂದ ಇಸ್ರೇಲ್ ಮೇಲೆ ಸುಮಾರು 400 ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ಹಮಾಸ್ ನಾಯಕ ಹತ್ಯೆಗೆ ಪ್ರತಿಕಾರವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸುವ ನಿರ್ಧಾರವನ್ನು ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ (SNSC) ಮಾಡಿದೆ ಅಂತ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

ಹಮಾಸ್ ನಾಯಕ ಹತ್ಯೆಗೆ ಪ್ರತಿಕಾರ

ಜುಲೈ 31ರಂದು ಟೆಹ್ರಾನ್‌ನಲ್ಲಿ ಫೆಲೆಸ್ತೀನ್ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ನನ್ನು ಇಸ್ರೇಲ್ ಹತ್ಯೆ ಮಾಡಲಾಗಿತ್ತು. ಸೆಪ್ಟೆಂಬರ್ 27 ರಂದು ಬೈರುತ್, ಲೆಬನಾನ್‌ನಲ್ಲಿ ತನ್ನ ಬೃಹತ್ ವೈಮಾನಿಕ ದಾಳಿಯಲ್ಲಿ, ಇಸ್ರೇಲ್ ಇರಾನಿನ ಬ್ರಿಗೇಡಿಯರ್ ಜನರಲ್ ಅಬ್ಬಾಸ್ ನಿಲ್ಫೊರೌಶನ್ ಎಂಬಾತನನ್ನೂ ಹತ್ಯೆ ಮಾಡಿತ್ತು. ಇದಕ್ಕೆ ಪ್ರತಿಕಾರವಾಗಿ ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಿದೆ ಎನ್ನಲಾಗಿದೆ.

ಬಾಂಬ್ ಬಂಕರ್‌ಗಳಲ್ಲಿ ಆಶ್ರಯ

ಇಸ್ರೇಲ್ ರಕ್ಷಣಾ ಪಡೆಗಳು (IDF) ಸಹ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಕನ್ಫರ್ಮ್ ಮಾಡಿವೆ. ಇರಾನ್‌ನಿಂದ ರಾಕೆಟ್‌ಗಳನ್ನು ಇಸ್ರೇಲ್‌ಗೆ ಹಾರಿಸುವುದರಿಂದ ಎಲ್ಲಾ ಇಸ್ರೇಲಿ ನಾಗರಿಕರು ಬಾಂಬ್ ಬಂಕರ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ ಅಂತ ಮೂಲಗಳು ತಿಳಿಸಿವೆ.

ಅಪಾರ ಪ್ರಮಾಣದ ಸಾವು ನೋವು ಸಾಧ್ಯತೆ

ಇಸ್ರೇಲ್‌ನ ವಾಣಿಜ್ಯ ರಾಜಧಾನಿ ಟೆಲ್ ಅವಿವ್‌ನಲ್ಲಿ ಭಯೋತ್ಪಾದನೆ ಗುಂಡಿನ ದಾಳಿ ನಡೆದಿತ್ತು. ಇದರ ಬಳಿಕ ಕ್ಷಿಪಣಿಗಳನ್ನು ಉಡಾವಣೆ ಮಾಡಲಾಗಿದೆ. ಕ್ಷಿಪಣಿ ದಾಳಿಯಿಂದ ಹಲವಾರು ಸಾವುನೋವುಗಳು ಸಂಭವಿಸಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ

Leave a Reply

Your email address will not be published. Required fields are marked *

Join WhatsApp Group
error: Content is protected !!