ಅ ಲಿಗಢ: ಉತ್ತರ ಪ್ರದೇಶದ ಅಲಿಗಢದಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಮೇಲೆ ಆಸಿಡ್ ಎರಚಿದ್ದಾಳೆ. ಹಲವು ವರ್ಷಗಳ ಬ್ಲ್ಯಾಕ್‌ ಮೇಲ್‌ ಗೆ ಪ್ರತೀಕಾರವಾಗಿ ಈ ಕೃತ್ಯವೆಸಗಿದ್ದಾಳೆ ಎಂದು ಆರೋಪಿಸಲಾಗಿದೆ.

ವರ್ಷಾ ಎಂದು ಗುರುತಿಸಲಾಗಿರುವ ಮಹಿಳೆಯು ವಿವೇಕ್ ಎಂಬ ವ್ಯಕ್ತಿಯೊಂದಿಗೆ ಕಳೆದ 12 ವರ್ಷಗಳಿಂದ ವಿವಾಹವಾಗಿದ್ದರೂ ಸಹ ಸಂಬಂಧ ಹೊಂದಿದ್ದಳು.

ವಿವೇಕ್ ಸ್ಥಳೀಯ ರೆಸ್ಟೋರೆಂಟ್‌ ನಲ್ಲಿ ಭೇಟಿಯಾಗಲು ಬಂದಾಗ ವರ್ಷಾ ಆಸಿಡ್ ಎರಚಿದ್ದಾಳೆ.

ಅವರಿಬ್ಬರ ಮಾತುಕತೆಯ ವೇಳೆ ವರ್ಷಾ ಇದ್ದಕ್ಕಿದ್ದಂತೆ ತನ್ನ ಬ್ಯಾಗ್‌ನಿಂದ ಆಸಿಡ್ ಬಾಟಲಿಯನ್ನು ತೆಗೆದು ವಿವೇಕ್ ಮೇಲೆ ಎಸೆದಿದ್ದಾಳೆ. ಅವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ವರ್ಷಾ ಮತ್ತು ರೆಸ್ಟೋರೆಂಟ್ ಉದ್ಯೋಗಿಗೂ ಸಹ ಸುಟ್ಟ ಗಾಯಗಳಾಗಿವೆ.

ದಾಳಿಯ ನಂತರ ವಿವೇಕ್ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಆಗಮಿಸಿದ ಪೊಲೀಸರು ವರ್ಷಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ವಿವೇಕ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ರೆಸ್ಟೋರೆಂಟ್ ಮಾಲೀಕ ದೀಪಕ್ ಗಾರ್ಗ್ ಪ್ರಕಾರ, ಘಟನೆ ಬೆಳಿಗ್ಗೆ 11:30 ರ ಸುಮಾರಿಗೆ ನಡೆದಿದೆ. ಘಟನೆ ಬಳಿಕ ನಾನು ಮಹಿಳೆಯನ್ನು ಕೇಳಿದಾಗ 12 ವರ್ಷಗಳಿಂದ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕಾರಣ ಆತನ ಮೇಲೆ ಆಸಿಡ್ ಎರಚಿದ್ದಾಗಿ ಮಹಿಳೆ ತಿಳಿಸಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

ಸಹಾಯಕ ಪೊಲೀಸ್ ಅಧೀಕ್ಷಕ(ಎಎಸ್ಪಿ) ವರುಣ್ ಕುಮಾರ್ ಮಿಶ್ರಾ ಅವರು, ವರ್ಷಾ ವಿವಾಹಿತರಾಗಿದ್ದರೆ, ದಾಳಿಯ ಹಿಂದಿನ ಉದ್ದೇಶವೇನು ಎಂಬುದು ಸ್ಪಷ್ಟವಾಗಿಲ್ಲ. ವರ್ಷಾ ತನ್ನ ಸ್ನೇಹಿತ ವಿವೇಕ್ ಮೇಲೆ ಆಸಿಡ್ ಎರಚಿದ ನಂತರ ಸ್ಥಳದಿಂದ ಓಡಿಹೋಗಿದ್ದಾನೆ. ವರ್ಷಾ ಮೇಲೂ ಆಸಿಡ್ ಚೆಲ್ಲಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮಗೆ ಇನ್ನೂ ಅಧಿಕೃತ ದೂರು ಬಂದಿಲ್ಲ, ಆದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವರ್ಷಾ ಮತ್ತು ವಿವೇಕ್ ನಡುವೆ ಪರಸ್ಪರ ಸಂಬಂಧವಿತ್ತು, ವೈಯಕ್ತಿಕ ಭಿನ್ನಾಭಿಪ್ರಾಯದಿಂದ ಈ ರೀತಿ ಆಗಿದೆ. ವಿವೇಕ್ ನನ್ನು ಪತ್ತೆ ಮಾಡಿ ಇಬ್ಬರ ವಿಚಾರಣೆ ನಡೆಸಲಾಗುವುದು. ಪೊಲೀಸರು ರೆಸ್ಟೋರೆಂಟ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ವಿವೇಕ್ ಅವರ ಬೈಕ್ ಮತ್ತು ಫೋನ್ ಸಂಖ್ಯೆಯನ್ನು ಬಳಸಿಕೊಂಡು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!