ಉತ್ತರ ಕನ್ನಡ, ಅ.06: ಸಮುದ್ರದಲ್ಲಿ ಮುಳುಗಿ ಬೆಂಗಳೂರು ಮೂಲದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮತ್ತೊಬ್ಬನನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ(Murdeshwar) ಕಡಲ ತೀರದಲ್ಲಿ ನಡೆದಿದೆ. ಬೆಂಗಳೂರಿನ ವಿದ್ಯಾಸೌಧ ಪಿ.ಯು ಕಾಲೇಜು ವಿದ್ಯಾರ್ಥಿ ಗೌತಮ್ (17) ಮೃತ ರ್ದುದೈವಿ. ಬೆಂಗಳೂರಿನ ಧನುಶ್ .ಡಿ. ರಕ್ಷಣೆಗೊಳಗಾದ ವಿದ್ಯಾರ್ಥಿ.

ಬೆಂಗಳೂರಿನಿಂದ ವಿದ್ಯಾ ಸೌಧ ಕಾಲೇಜಿನ 220 ವಿದ್ಯಾರ್ಥಿಗಳು ಪ್ರವಾಸಕ್ಕೆ ಆಗಮಿಸಿದ್ದರು. ಈ ವೇಳೆ ಇಬ್ಬರು ವಿದ್ಯಾರ್ಥಿಗಳು ಸಮುದ್ರದ ಆಳದಲ್ಲಿ ಈಜಲು ತೆರಳಿದ್ದರು. ಅಲೆಗಳ ಅಬ್ಬರಕ್ಕೆ ಇಬ್ಬರು ನೀರಿನಲ್ಲಿ ಮುಳಿಗಿದ್ದು, ಧನುಷ್ನನ್ನು ನೋಡಿದ ಲೈಫ್ ಗಾರ್ಡ್ ಹಾಗೂ ಪೊಲೀಸರು ಆತನನ್ನು ರಕ್ಷಣೆ ಮಾಡಿದ್ದರು. ಗೌತಮ್ ಕೂಡ ಈಜಲು ಬಂದಿರುವ ಮಾಹಿತಿಯನ್ನ ಧನುಷ್ ಹೇಳದಿದ್ದರಿಂದ ಮಾಹಿತಿ ತಿಳಿಯದೇ ಓರ್ವನನ್ನು ಮಾತ್ರ ರಕ್ಷಣೆ ಮಾಡಲಾಗಿದೆ.

ವಿದ್ಯಾರ್ಥಿ ಸಂಖ್ಯೆ ಎಣಿಸಿದಾಗ ಗೌತಮ್ ಕೂಡ ಸಮುದ್ರದಲ್ಲಿ ಈಜಲು ಹೋಗಿರುವುದು ಗಮನಕ್ಕೆ ಬಂದಿದೆ. ನಂತರ ಮುರುಡೇಶ್ವರ ಎ.ಸ್.ಐ ರುದ್ರೇಶ್, ಲೈಪ್ ಗಾರ್ಡ್ ಹಾಗೂ ನೇತ್ರಾಣಿ ಅಡ್ವೆಂಚರ್ಸ ತಂಡ ಶೋಧ ನಡೆಸಿ ಶವವನ್ನು ಹೊರಕ್ಕೆ ತೆಗೆಯಲಾಗಿದೆ. ಈ ಕುರಿತು
ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!