ಮಾಡಾವು : ಭಾರತ್‌ ಪೆಟ್ರೋಲಿಯಂ ಕಾರ್ಪೋರೇಶನ್ ಲಿ. ಇದರ ಪೆಟ್ರೋಲ್ ಡಿಸೇಲ್ ವಿತರಕ ಸಂಸ್ಥೆ ಜನ್ಮಭೂಮಿ ಪೆಟ್ರೋಲಿಯಂ ಇದರ ಉದ್ಘಾಟನಾ ಸಮಾರಂಭವು ಅ.11ರಂದು ಪುತ್ತೂರಿನ ಮಾಡಾವುನಲ್ಲಿ ನೆರವೇರಲಿದೆ.

ಕುಂಬ್ರ-ಬೆಳ್ಳಾರೆ ರಸ್ತೆಯ ಮಾಡಾವು ಜಂಕ್ಷನ್ ನ ಬಳಿಯಲ್ಲಿ ಜನ್ಮಭೂಮಿ ಪೆಟ್ರೋಲಿಯಂ ಪೆಟ್ರೋಲ್ – ಡೀಸಿಲ್ ವಿತರಕ ಸಂಸ್ಥೆ ಉದ್ಘಾಟನಾ ಸಮಾರಂಭ ಶುಕ್ರವಾರ ಬೆಳಿಗ್ಗೆ 10.35ಕ್ಕೆ ನೆರವೇರಲಿರುವುದು.

ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲನೆಯನ್ನು ಕೆ.ಎಂ. ಮೋಹನ ರೈ ಹಾಗೂ ಜಯಂತಿ ಎಂ ರೈ ನೆರವೇರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಪುತ್ತೂರಿನ ಶಾಸಕರಾದ ಅಶೋಕ್‌ ಕುಮಾರ್ ರೈ, ದ.ಕ. ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ಕೆಯ್ಯರು ಗ್ರಾ.ಪಂ ಅಧ್ಯಕ್ಷ ಶರತ್‌ ಕುಮಾರ್, ಮಂಗಳೂರು ಭಾರತ್ ಪೆಟ್ರೋಲಿಯಂನ ಪ್ರಾದೇಶಿಕ ವ್ಯವಸ್ಥಾಪಕ ಅಮೋಲ್ ಬೊಸ್ಥೆ, ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಐಎಎಸ್, ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘ ನವದೆಹಲಿ ಇಲ್ಲಿನ ರಾಷ್ಟ್ರೀಯ ಕಾರ್ಯದರ್ಶಿ ವಿಶ್ವಾಸ್‌ ಶೆಣೈ ಆಗಮಿಸಲಿದ್ದಾರೆ.

ಗೌರವ ಉಪಸ್ಥಿತಿಯಲ್ಲಿ ಮಂಗಳೂರು ಮಾಸ್‌ ಅಧ್ಯಕ್ಷರಾದ ಸವಣೂರು ಸೀತಾರಾಮ ರೈ, ಮಂಗಳೂರು ಕೆ.ಎಂ.ಎಫ್. ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ, ಮಾಡಾವು ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಹುಸೈನಾ‌ರ್ ಹಾಜಿ ಸಂತೋಷನಗರ, ಕೆಯ್ಯರು ವರ್ತಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಕೆಂಗುಡೇಲು, ಕೆಯ್ಯರು ಗ್ರಾ.ಪಂ. ಸದಸ್ಯರಾದ ತಾರನಾಥ ಕಂಪ ಆಗಮಿಸಲಿದ್ದಾರೆ.

ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಎಲ್ಲಾ ಸೌಲಭ್ಯಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಾಲಕರಾದ ಹರ್ಷ ಕುಮಾರ್ ರೈ ಮಾಡಾವು ವಿನಂತಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!