
ಪುತ್ತೂರು: ಪುತ್ತೂರು ಸಿಟಿ ಗೋಲ್ಡ್ ನಲ್ಲಿ ‘ಬಿ ದಜ್ಯುವೆಲ್’ ಪ್ರದರ್ಶನ ಹಾಗೂ ಹೊಚ್ಚ ಹೊಸ ವಿನ್ಯಾಸಗಳಿಂದ ಕೂಡಿರುವ ಅತ್ಯಾಕಷರ್ಕವಾದ ಪೊಲ್ಕಿ, ಆ್ಯಂಟಿಕ್ ಡೈಮಂಡ್‌ಗಳ ಬಿಡುಗಡೆ ಕಾರ್ಯಕ್ರಮ ಅ. 8ರಂದು ಪುತ್ತೂರು ಸಿಟಿ ಗೋಲ್ಡ್ ಸಭಾಂಗಣದಲ್ಲಿ ನಡೆಯಿತು.
ರೂಪದರ್ಶಿ ಹಾಗೂ ಚಲನಚಿತ್ರ ನಟಿ ಸಮತ ಅಮೀನ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕರ್ನಾಟಕ ಹಾಗೂ ಕೇರಳದ ವಿವಿಧ ಕಡೆಗಳಲ್ಲಿ ಸಿಟಿ ಗೋಲ್ಡ್ ಚಿನ್ನಾಭರಣಗಳ ಮಳಿಗೆಯನ್ನು ಹೊಂದಿದ್ದು ಗ್ರಾಹಕರ ಸಹಕಾರದಿಂದ ಯಶಸ್ವಿಯಾಗಿ ನಡೀತಾ ಬರ್ತಿದ್ದು ಇದರ ಯಶಸ್ಸಿನಿಂದ ಇದೀಗ ದುಬೈಯಲ್ಲಿ ಕೂಡ ಸಿಟಿಗೋಲ್ಡ್ ಚಿನ್ನಾಭರಣ ಮಳಿಗೆಯು ಆರಂಭಗೊಳ್ಳಲಿದೆ. ಇದು ಸಂತಸದ ವಿಚಾರವಾಗಿದೆ. ಈ ಸಂಸ್ಥೆ ಗ್ರಾಹಕರ ಪ್ರೀತಿ ವಿಶ್ವಾಸ ಗಳಿಸಿದ್ದು ಮುಂದೆಯೂ ಈ ಸಂಸ್ಥೆ ಯಶಸ್ಸಿನತ್ತ ಸಾಗಲಿ ಎಂದು ಹಾರೈಸಿದರು.
ಪುತ್ತೂರು ಸಿಟಿ ಗೋಲ್ಡ್‌ನ ಪಾಲುದಾರರಲ್ಲಿ ಓರ್ವರಾದ ಆದಂ ಹಾಜಿ ರವರು ಮಾತನಾಡಿ ಪುತ್ತೂರಿನಲ್ಲಿ ಕಳೆದ 12 ವರ್ಷಗಳಿಂದ ಉತ್ತಮ ರೀತಿಯಲ್ಲಿ ವ್ಯವಹರಿಸುತ್ತಾ ಲಕ್ಷಾಂತರ ಗ್ರಾಹಕರ ಮನ ಸೂರೆಗೊಂಡ ಪುತ್ತೂರು ಮುಖ್ಯ ರಸ್ತೆಯ ಸಿಟಿ ಗೋಲ್ಡ್ ಸಂಸ್ಥೆ ಗ್ರಾಹಕರ ಸಹಕಾರದಿಂದ ಪ್ರಗತಿಯ ಉತ್ತುಂಗಕ್ಕೆ ಏರಿದೆ. ಸಿಟಿ ಗೋಲ್ಡ್ ಸಂಸ್ಥೆಯಲ್ಲಿ ಗ್ರಾಹಕರಿಗಾಗಿ ಲಾಭದಾಯಕ ಪಿಎಫ್ ಹಾಗೂ ಸ್ತ್ರೀಮ್ ಗಳನ್ನು ಆಯೋಜಿಸಲಾಗಿದೆ ಗ್ರಾಹಕರ ಸಂತೃಪ್ತಿಯೇ ನಮ್ಮ ಧೈಯವಾಗಿದೆ ಎಂದು ಹೇಳಿ, ಗ್ರಾಹಕರು ಸಹಕರಿಸುವಂತೆ ವಿನಂತಿಸಿದರು.
ಸಿಟಿ ಗೋಲ್ಡ್ ಸಂಸ್ಥೆಯ ಅಸಿಸ್ಟೆಂಟ್ ಜನರಲ್ ಮೆನೇಜರ್ ಮೊಹಮ್ಮದ್ ಅಜ್ಜಲ್ ರವರು ಮಾತನಾಡಿ ಪುತ್ತೂರು ಸಿಟಿ ಗೋಲ್ಡ್ ನಲ್ಲಿ ಗ್ರಾಹಕರ ಅನುಕೂಲಕ್ಕಾಗಿ, ಮದುವೆ ಸಮಾರಂಭಗಳಿಗೆ ಬೇಕಾದ ಚಿನ್ನಾಭರಣಗಳನ್ನು ಮುಂಚಿತವಾಗಿಯೇ ಅಡ್ವಾನ್ಸ್ ನೀಡಿದರೆ ಅಡ್ವಾನ್ಸ್ ನೀಡಿದ ದಿನ ಇರುವ ದರದಲ್ಲಿ ಮದುವೆ ಸಮಾರಂಭಗಳಿಗೆ ಬೇಕಾದ ಚಿನ್ನಾಭರಣಗಳನ್ನು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ವಿನಂತಿಸಿದರು. ಸಿಟಿ ಗೋಲ್ಡ್ ಪಾಲುದಾರ, ನ್ಯಾಯವಾದಿ-ನೋಟರಿ ಫಝಲ್ ರಹೀಂ ಶುಭಹಾರೈಸಿದರು.
ಮಲೇಶಿಯಾ ಪ್ರವಾಸಕ್ಕೆ ಆಯ್ಕೆಗೊಂಡ ಸಾಜೀದ್ ಮುರ ದಂಪತಿ ಸಿಟಿಗೋಲ್ಡ್ ಸಂಸ್ಥೆಯು ಈ ಹಿಂದೆ ಆರಂಭಿಸಿದ್ದ ಚಿನ್ನಾಭರಣ ಖರೀದಿಸಿದ ನೂತನ ದಂಪತಿಗಳಿಗೆ ಏರ್ಪಡಿಸಲಾದ ಮಲೇಷ್ಯಾ ಪ್ರವಾಸ ಲಕ್ಕಿ ಡ್ರಾದಲ್ಲಿ ಮುರ ನಿವಾಸಿ ಸಾಜಿದ್ ದಂಪತಿ ಆಯ್ಕೆಗೊಂಡರು. ಇವರನ್ನು ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು. ಶೀಘ್ರದಲ್ಲಿ ಇವರು ಮಲೇಷ್ಯಾ ಪ್ರವಾಸ ಹೊರಡಲಿದ್ದಾರೆ.
ಡೈಮಂಡ್ ಉಂಗುರ ವಿಜೇತರಾದ ಅಲ್ತಾಫ್ ಕಾರ್ಜಲ್ ಕಾರ್ಯಕ್ರಮದ ಅಂಗವಾಗಿ ಗ್ರಾಹಕರಿಗಾಗಿ ಏರ್ಪಡಿಸಲಾದ ಲಕ್ಕಿ ಡ್ರಾ ದಲ್ಲಿ ಅಲ್ತಾಫ್ ಕಾರ್ಜಲ್‌ರವರು ವಿಜೇತರಾಗಿದ್ದು ಅವರಿಗೆ ಡೈಮಂಡ್ ಉಂಗುರವನ್ನು ಬಹುಮಾನವಾಗಿ ನೀಡಲಾಯಿತು
ಮನರಂಜನಾ ಕಾರ್ಯಕ್ರಮ ಸಿಟಿ ಗೋಲ್ಡ್ ನಲ್ಲಿ ಬಿ ದ ಜುವೆಲ್ ಪ್ರದರ್ಶನದ ಅಂಗವಾಗಿ ರಸಮಂಜರಿ ಸೇರಿದಂತೆ ವಿವಿಧ ಸ್ವರ್ಧಾತ್ಮಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಪುತ್ತೂರು ಸಿಟಿ ಗೋಲ್ಡ್ ಸಂಸ್ಥೆಯ ಮ್ಯಾನೇಜರ್ ಜುನೈಎ.ಕೆ., ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯು ಬೆಳೆದು ಬಂದ ಬಗ್ಗೆ ವಿವರಿಸಿದರು. ಮೆನೇಜರ್ ಶೌಕತ್ ಅಲಿ ವಂದಿಸಿದರು. ಲತಾಶ ಕೇರಳ ರವರು ಕಾರ್ಯಕ್ರಮ ನಿರೂಪಿಸಿದರು








