



ಪುತ್ತೂರು: ಬೆಂಗಳೂರಿನ ಖ್ಯಾತ ವಿಮಾನಯಾನ ತರಬೇತಿ ಸಂಸ್ಥೆ ‘ಸೈಬರ್ಡ್ ಏವಿಯೇಷನ್’ ಸಹಯೋಗದಲ್ಲಿ ಪುತ್ತೂರಿನಲ್ಲಿ ನೂತನವಾಗಿ ಆರಂಭಗೊಂಡ “ಶ್ರೀ ಪ್ರಗತಿ ವಿಸ್ತಾರ ಕಾಲೇಜು ಫಾರ್ ಏವಿಯೇಷನ್ ಆಂಡ್ ಮ್ಯಾನೇಜ್ ಮೆಂಟ್’ ಆಸಕ್ತ ವಿದ್ಯಾರ್ಥಿಗಳಿಗೆ ಮತ್ತವರ ಪೋಷಕರಿಗೆ ವೆಬಿನಾರ್ ಆಯೋಜಿಸಲಾಗಿದೆ.
ವಿಮಾನಯಾನಕ್ಕೆ ಸಂಂಬಂಧಿಸಿದ ಪದವಿ ಮತ್ತು ಡಿಪ್ಲೋಮಾ ಕೋಸ್ ೯ಗಳ ಮತ್ತು ಅದು ತೆರೆದಿಡುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಪಡೆಯಲು ಈ ವೆಬಿನಾರ್ ಸಹಕಾರಿಯಾಗಲಿದೆ.
ಸಂಸ್ಥೆಯನುರಿತಹಿರಿಯ ಅಧಿಕಾರಿಗಳು ದೇಶ ವಿದೇಶದ ವಿಮಾನಯಾನ ಸಂಸ್ಥೆಗಳಲ್ಲಿ ಶೇಕಡಾ 100ರಷ್ಟು ಉದ್ಯೋಗಾವಕಾಶದ ಭರವಸೆಯೊಂದಿಗೆ ವಿಮಾನಯಾನ ಸಂಬಂಧಿತ ಪದವಿ ಮತ್ತು ಡಿಪ್ಲೊಮಾ ಕೋರ್ಸುಗಳನ್ನು ಪಡೆಯಲು ಇಚ್ಚಿಸುವ ಆಸಕ್ತ ವಿದ್ಯಾರ್ಥಿಗಳಿಗೆ ಕ್ಯಾಬಿನ್ ಕ್ರೂ, ಮ್ಯಾನೇಜ್ ಮೆಂಟ್, ಗ್ರೆಂಡ್ ಹ್ಯಾಂಡ್ಲಿಂಗ್ ಸೇರಿದಂತೆ ಸಂಸ್ಥೆಯಲ್ಲಿ ಲಭ್ಯವಿರುವ ಇನ್ನಷ್ಟು ಕೋರ್ಸ್‌ಗಳ ಮಾಹಿತಿಯನ್ನು ಈ ಉಚಿತ ವೆಬಿನಾರ್ ನಲ್ಲಿ ನೀಡಲಿದ್ದಾರೆ. ಆಕಾಶದೆತ್ತರಕ್ಕೆ ಹಾರುವ ನಿಮ್ಮ ಕನಸಿಗೆ ರೆಕ್ಕೆ ಕಟ್ಟಿಕೊಟ್ಟು ನನಸಾಗಿಸಲು ಉತ್ಸುಕವಾಗಿರುವ ಶ್ರೀ ಪ್ರಗತಿ ವಿಸ್ತಾರ ಏವಿಯೇಷನ್ ಅ.24ರಂದು ಅಪರಾಹ್ನ 3 ಗಂಟೆಗೆ ಗೂಗಲ್ ಮೀಟ್ ನಲ್ಲಿ ಈ ವೆಬಿನಾರ್ ಆಯೋಜಿಸಿದ್ದು ಆಸಕ್ತ ವಿದ್ಯಾರ್ಥಿಗಳು 9148516884 ನಂಬರ್ ಸಂಪರ್ಕಿಸುವ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಸಂಸ್ಥೆಯ ಪ್ರಕಟಣೆ ತಿಳಿಸಿದೆ.
