ಚಿ ಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಿ.ಟಿ.ರವಿ ಅವರ ಆಪ್ತ ಅನ್ವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.ಅನ್ವರ್ ಹತ್ಯೆ ನಡೆದು 6 ವರ್ಷಗಳಾದರೂ ಈವರೆಗೂ ಆರೋಪಿಗಳ ಪತ್ತೆಯಾಗಿಲ್ಲ.

ಈ ಹಿನ್ನೆಲೆಯಲ್ಲಿ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ಖುದ್ದು ಪ್ರಕರಣದ ತನಿಖೆಗೆ ಇಳಿದಿದ್ದು, ಚಿಕ್ಕಮಗಳೂರಿಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಬಿಜೆಪಿ ಮುಖಂಡ ಅನ್ವರ್ ಅವರನ್ನು 2018ರ ಜೂನ್ 22ರಂದು ಉಪ್ಪಳ್ಳಿ ಬಡಾವಣೆಯಲ್ಲಿನ ಅವರ ಮನೆ ಬಳಿಯೇ ಕೊಲೆ ಮಾಡಲಾಗಿತ್ತು. ಘಟನೆಯಿಂದ ಇಡೀ ಚಿಕ್ಕಮಗಳೂರು ಜಿಲ್ಲೆಯ ಜನರೇ ಬೆಚ್ಚಿ ಬಿದ್ದಿದ್ದರು. 2019ರಲ್ಲಿ ಅಂದಿನ ಬಿಜೆಪಿ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಆದರೆ ಇಂದಿಗೂ ಅನ್ವರ್ ಕೊಲೆ ಆರೋಪಿಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಸಿಐಡಿ ಎಡಿಜಿಪಿ ಅವರೇ ಖುದ್ದು ತನಿಖೆಗೆ ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!