ಪುತ್ತೂರು: ಪುತ್ತೂರಿನ ಕೊಂಬೆಟ್ಟು ಮಮ್ಮಿ ಜ್ಯೂಸ್‌ನ ಮಾಲಕ ಜ್ಞಾನಾನಂದ ಹೆಗ್ಡೆ (58) ಅ. 29ರಂದು ಸಂಜೆ ಬೆಂಗಳೂರಿನಲ್ಲಿ ನಿಧನರಾದರು.

ಉರ್ಲಾಂಡಿ ದಿ. ಶ್ರೀನಿವಾಸ ಹೆಗ್ಡೆ ಅವರ ಪುತ್ರ ಜ್ಞಾನಾನಂದ ಹೆಗ್ಡೆಯವರು ಪುತ್ತೂರು ಕೊಂಬೆಟ್ಟಿನಲ್ಲಿ ಕಬ್ಬಿನ ಹಾಲಿನ ‘ಮಮ್ಮಿ ಜ್ಯೂಸ್’ ಸೆಂಟರ್ ನಡೆಸುತ್ತಿದ್ದರು, ಅನಾರೋಗ್ಯದಿಂದಾಗಿ ವ್ಯವಹಾರದಿಂದ ನಿವೃತ್ತಿ ಪಡೆದಿದ್ದ ಅವರು ಕಾರ್ಯಕ್ರಮಕ್ಕೆ ಸಂಬಂಧಿಸಿ ಬೆಂಗಳೂರಿಗೆ ಹೋಗಿದ್ದ ಸಂದರ್ಭ ಅಲ್ಲಿ ಹೃದಯಾಘಾತಕ್ಕೀಡಾಗಿ ನಿಧನರಾದರು.

ಮೃತರು ತಾಯಿ ಮನೋರಮ ಶ್ರೀನಿವಾಸ ಹೆಗ್ಡೆ, ಪತ್ನಿ ಮಂಜುಳಾ, ಪುತ್ರಿಯರಾದ ಶ್ರೀಮಾ ಮತ್ತು ಶ್ರೀಜಾ ಹಾಗೂ ಸಹೋದರರಾದ ನ್ಯೂ ತಾಜ್ ಮಹಾಲ್ ಹೊಟೇಲ್‌ನ ಮಾಲಕ ತಾರಾನಾಥ ಹೆಗ್ಡೆ, ಗಿರಿಧರ ಹೆಗ್ಡೆ, ನಿತ್ಯಾನಂದ ಹೆಗ್ಡೆ ಮತ್ತು ಆರು ಮಂದಿ ಸಹೋದರಿಯರನ್ನು ಅಗಲಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!