ಹಾವೇರಿ ಜಿಲ್ಲೆಯ ಶಿಗ್ಗಾವಿ (Shiggaon) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ (Bharat Bommai) ಸೋಲು ಕಂಡಿದ್ದು, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಗೆ (Basavaraj Bommai) ತೀವ್ರ ಮುಖಭಂಗವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ (Yaseer Khan Pathan) ಭಾರೀ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.
ಈ ಕುರಿತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರದ ವಿರುದ್ಧ ಅಧಿಕಾರ, ಹಣದ ಪ್ರಭಾವದ ಆರೋಪ ಮಾಡಿದ್ದಾರೆ.
ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಭರತ್ ಬೊಮ್ಮಾಯಿ ಅವರಿಗೆ ಪೈಲ್ವಾನ್ ಪಾಠಾಣ್ ಟಫ್ ಫೈಟ್ ಕೊಡುತ್ತಾ ಬಂದು ಕೊನೆಗೂ ಗೆಲುವು ಕಂಡಿದ್ದಾರೆ. ಇದಕ್ಕೂ ಮುನ್ನ ಬಸವರಾಜ್ ಬೊಮ್ಮಾಯಿ ಹಾಗೂ ಭರತ್ ಬೊಮ್ಮಾಯಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು.
ಆರಂಭಿಕ ಹಂತದಿಂದಲೂ ಎನ್‌ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ ಮುನ್ನಡೆ ಸಾಧಿಸಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಅವರು ಟೈಟ್ ಫೈಟ್ ನೀಡುತ್ತಾ ಬಂದು, ಮಧ್ಯದಲ್ಲಿ ಓವರ್‌ಟ್ಯಾಕ್ ಮಾಡಿ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುತ್ತಾ ಸಾಗಿದರು. ಇದೀಗ ಅಂತಿಮವಾಗಿ ಪೈಲ್ವಾನ್ ಪಠಾಣ್ ಗೆಲುವು ಕಂಡಿದ್ದಾರೆ.














