ಮದುವೆಯ ಮೊದಲ ರಾತ್ರಿಯೇ ಪತ್ನಿ ತನ್ನ ಪತಿಗೆ ಹಾಲಿನಲ್ಲಿ ಮತ್ತು ಭರಿಸುವ ಔಷಧ ಹಾಕಿ ನೀಡಿ ಮನೆಯಲ್ಲಿದ್ದ 12 ಲಕ್ಷ ಮೌಲ್ಯದ ನಗನಗದು ದೋಚಿ ಪರಾರಿಯಾಗಿರುವ ಘಟನೆಯೊಂದು ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಬೆಳಕಿಗೆ ಬಂದಿದೆ.

ಇದೀಗ ಮದುವೆಗಾಗಿ ಸಾಲಸೋಲ ಮಾಡಿ ಮಾಡಿಟ್ಟ ಚಿನ್ನಾಭರಣ ಮತ್ತು ಲಕ್ಷಾಂತರ ಹಣವನ್ನು ಒಂದೇ ರಾತ್ರಿಯಲ್ಲಿ ಮದುಮಗಳು ದೋಚಿದ್ದು ವರನ ಮನೆಯವರನ್ನು ದಿಗ್ಭ್ರಮೆಗೊಳಿಸಿದೆ.

ಏನಿದು ಪ್ರಕರಣ:
ಮಧ್ಯಪ್ರದೇಶದ ಛತ್ತರ್‌ಪುರದ ಕುಲವಾರ ಗ್ರಾಮದ ರಾಜ್‌ದೀಪ್ ರಾವತ್ ಅವರ ವಿವಾಹವು ಚರಖಾರಿ ಗ್ರಾಮದ ಖುಷಿ ತಿವಾರಿ ಅವರೊಂದಿಗೆ ಡಿಸೆಂಬರ್ 12 ರಂದು ಧನುಷ್ಧಾರಿ ದೇವಸ್ಥಾನದಲ್ಲಿ ವಿಧಿವತ್ತಾಗಿ ನೆರವೇರಿತು. ಎರಡೂ ಕಡೆಯ ಕುಟುಂಬ ಸದಸ್ಯರು ಮದುವೆಯ ಸಂಭ್ರಮದಲ್ಲಿ ಖುಷಿ ಖುಷಿಯಾಗಿ ಭಾಗಿಯಾಗಿದ್ದರು ಅಂತೂ ದೇವಸ್ಥಾನದಲ್ಲಿ ಮದುವೆ ಕಾರ್ಯಗಳು ಒಳ್ಳೆ ರೀತಿಯಲ್ಲಿ ನಡೆದಿತ್ತು ಕೊನೆಗೆ ಹೆಣ್ಣಿನ ಕಡೆಯವರು ತನ್ನ ಮಗಳನ್ನು ಅಳಿಯನ ಕೈಗೆ ಕೊಟ್ಟು ಸಂತೋಷವಾಗಿ ಬಾಳಿ ಎಂದು ಆಶೀರ್ವದಿಸಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಇತ್ತ ಮದುವೆ ಮೊದಲ ರಾತ್ರಿ ಮದುಮಗಳು ತನ್ನ ಪತಿಗೆ ಕುಡಿಯಲು ಹಾಲು ನೀಡಿದ್ದಾಳೆ ಪತಿಯು ಖುಷಿಯಲ್ಲೇ ಕುಡಿದಿದ್ದಾನೆ ಇಷ್ಟಾದ ಕೆಲವೇ ಹೊತ್ತಿನಲ್ಲಿ ಪತಿ ನಿದ್ರೆಗೆ ಜಾರಿದ್ದಾನೆ ಅಷ್ಟೋತ್ತಿಗಾಗಲೇ ಮಧ್ಯರಾತ್ರಿಯಾಗಿತ್ತು, ಕೂಡಲೇ ವದು ಮದುಮಗನ ಮನೆಯಲ್ಲಿದ್ದ ಸುಮಾರು 10 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಒಟ್ಟುಮಾಡಿ ರಾತ್ರೋರಾತ್ರಿ ಮನೆಯಿಂದ ಓಡಿ ಹೋಗಿದ್ದಾಳೆ.

ಇತ್ತ ಬೆಳಿಗ್ಗೆ ವರನ ತಾಯಿ ಕೋಣೆಗೆ ಬಂದು ಎಬ್ಬಿಸಲು ಬಂದಾಗ ಕೊನೆಯ ಬಾಗಿಲು ತೆರೆದಿತ್ತು ಕೊನೆಯ ಒಳಗೆ ಹೋಗಿ ನೋಡಿದಾಗ ಮಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ ಕೂಡಲೇ ತಾಯಿ ಮನೆಯಲ್ಲಿದ್ದ ಇತರ ಸದಸ್ಯರನ್ನು ಕರೆದು ಮದುಮಗಳನ್ನು ಹುಡುಕಿದಾಗ ಮದುಮಗಳು ನಾಪತ್ತೆಯಾಗಿದ್ದಳು, ಇತ್ತ ಮನೆಯಲ್ಲಿದ್ದ ಚಿನ್ನಾಭರಣ, ನಗದು ಸೇರಿ ಎಲ್ಲವೂ ನಾಪತ್ತೆಯಾಗಿತ್ತು.

ಆಸ್ಪತ್ರೆಗೆ ದಾಖಲಾದ ಮದುಮಗ:
ಮದುವೆಯ ರಾತ್ರಿ ಮದುಮಗಳು ಹಾಲಿನಲ್ಲಿ ಅಮಲು ಪದಾರ್ಥ ಹಾಕಿ ನೀಡಿದ್ದನ್ನು ಕುಡಿದ ಮದುಮಗ ಪ್ರಜ್ಞಾಹೀನನಾಗಿದ್ದ ಅಲ್ಲದೆ ಬೆಳಿಗ್ಗೆವರೆಗೂ ಆತನಿಗೆ ಪ್ರಜ್ಞೆಯೇ ಬರಲಿಲ್ಲ ಇದರಿಂದ ಗಾಬರಿಗೊಂಡ ಮನೆಮಂದಿ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ ಸದ್ಯ ಮದುಮಗ ಚೇತರಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ.

ಮಧ್ಯವರ್ತಿಗೆ ಒಂದೂವರೆ ಲಕ್ಷ ರೂ. ನೀಡಿದ್ದ ವರನ ಕುಟುಂಬ:

ವರ ರಾಜದೀಪ್ ಅವರ ತಂದೆ ಅಶೋಕ್ ರಾವತ್ ಅವರು ಮಧ್ಯವರ್ತಿ ಪಪ್ಪು ರಜಪೂತ್ ಅವರಿಗೆ ಹೆಣ್ಣು ಹುಡುಕಿ ಕೊಟ್ಟ ವಿಚಾರಕ್ಕೆ ಅಲ್ಲದೆ ಎರಡೂ ಕಡೆಯ ಸಂಬಂಧ ಸೆಟ್ ಮಾಡಿದ್ದಕ್ಕಾಗಿ 1.5 ಲಕ್ಷ ರೂ. ನೀಡಿದ್ದರು ಎನ್ನಲಾಗಿದೆ.

ಇದೀಗ ವರನ ತಂದೆ ಅಶೋಕ್ ರಾವತ್ ಅವರು ವದು ಖುಷಿ ತಿವಾರಿ, ಆಕೆಯ ಸಹೋದರ ಛೋಟು ತಿವಾರಿ, ಸ್ನೇಹಿತ ವಿನಯ್ ತಿವಾರಿ ಮತ್ತು ಮಧ್ಯವರ್ತಿ ಪಪ್ಪು ರಜಪೂತ್ ವಿರುದ್ಧ ನೌಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ಬಳಿಕ ವದು ಆಕೆಯ ಸಹೋದರ,ಸ್ನೇಹಿತ ಹಾಗೂ ಮಧ್ಯವರ್ತಿ ಎಲ್ಲರೂ ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!