ಮುಕ್ಕದಲ್ಲಿ ನಂದಿನಿ ನದಿಯ ಹಿನ್ನೀರಿನ ತಟದಲ್ಲಿ ರೋಹನ್ ಎಸ್ಟೇಟ್ ನಿರ್ಮಿಸಿರುವ ಐಷಾರಾಮಿ ಬಡಾವಣೆಯ ನಿವೇಶನಗಳು ಮಾರಾಟಕ್ಕೆ ಸಜ್ಜಾಗಿವೆ. ಪ್ರಾಕೃತಿಕ ಸೊಬಗಿನ ಮಧ್ಯೆ ಅತ್ಯಂತ ಸುರಕ್ಷಿತ ಹಾಗೂ ಆಕರ್ಷಕವಾಗಿ ಬಡಾವಣೆ ರೂಪುಗೊಂಡಿದೆ’ ಎಂದು ಸಂಸ್ಥೆಯ ಮಾಲೀಕ ರೋಹನ್ ಮೊಂತೆರೊ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ನದಿ, ಸಮುದ್ರ ಹಾಗೂ ರಾಷ್ಟ್ರೀಯ ಹೆದ್ದಾರಿಯ ನಡುವೆ ನಿರ್ಮಾಣವಾದ ರೆಸಾರ್ಟ್ ಶೈಲಿಯ ವಸತಿ ಬಡಾವಣೆ ಇದು. ನಿಸರ್ಗದ ನಡುವೆ ನೆಮ್ಮದಿಯಾಗಿ ಬದುಕಲು ಬಯಸುವವರಿಗಾಗಿ ಈ ಐಷಾರಾಮಿ ಬಡಾವಣೆಯನ್ನು ರೆಸಾರ್ಟ್ ಮಾದರಿಯಲ್ಲಿ ವಿನ್ಯಾಸಗೊಳಿಸಿದ್ದೇವೆ. ಇಲ್ಲಿ ರೆಸಾರ್ಟ್ ಶೈಲಿಯ ಜೀವನದ ಅನುಭವ ಸಿಗಲಿದೆ. ನದಿ ದಂಡೆಯಲ್ಲಿ ತಡೆಗೋಡೆಯನ್ನು ಪ್ರವಾಸೋದ್ಯಮದ ನೆಲೆಯಲ್ಲಿ ಆಕರ್ಷಕವಾಗಿ ನಿರ್ಮಿಸಲಾಗಿದೆ. ಹಸಿರೀಕರಣಕ್ಕೆ ಆದ್ಯತೆ ನೀಡಿದ್ದೇವೆ’ ಎಂದರು.

ಈ ರೀತಿಯ ನದಿ ದಂಡೆ ಬಹಳ ಅಪರೂಪ. ಇತರ ಬಡಾವಣೆಗಳಿಗೆ ಹೋಲಿಸಿದರೆ ಇದು ಶ್ರೇಷ್ಠ ಹಾಗೂ ವಿಭಿನ್ನವಾಗಿದೆ. ಹೂಡಿಕೆ ಮತ್ತು ವಸತಿಗೂ ಇದು ಯೋಗ್ಯ. ಭವಿಷ್ಯದಲ್ಲೂ ನಮ್ಮ ಸಂಸ್ಥೆಯೇ ಇದರ ನಿರ್ವಹಣೆ ಮಾಡಲಿದೆ’ ಎಂದರು.

‘ಯೋಗ ಲಾನ್, ಧ್ಯಾನಕೇಂದ್ರ, ಸ್ಪಾ, ಲೈಫ್ ಸೈಜ್ ಚೆಸ್, ಮಕ್ಕಳಿಗೆ ಆಟದ ಮೈದಾನ, ಸ್ಕೇಟಿಂಗ್ ರಿಂಕ್, ಬ್ಯಾಡ್ಮಿಂಟನ್ ಅಂಕಣ, ಬಿಲಿಯರ್ಡ್ಸ್‌, ಸುಸಜ್ಜಿತ ಸಭಾಂಗಣ, ಲಾಡ್ಜಿಂಗ್, ಬಯಲು ರಂಗಮಂದಿರ ಮೊದಲಾದ ಸೌಲಭ್ಯಗಳು ಇಲ್ಲಿವೆ. ಸೂಪರ್ ಮಾರ್ಕೆಟ್ ಸೌಲಭ್ಯವಿದೆ. ಬ್ಯಾಂಕ್ ಸಾಲ ಕೊಡಿಸಲೂ ನೆರವಾಗುತ್ತೇವೆ’ ಎಂದರು.

‘ಸುರಕ್ಷತೆಗೆ ಮಹತ್ವ ನೀಡಿದ್ದೇವೆ. ಇಲ್ಲಿ ಆವರಣೆ ಗೋಡೆ ನಿರ್ಮಿಸಿ, ಸುರಕ್ಷತಾ ಗೇಟ್, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪ್ರ‌ಧಾನ ದ್ವಾರದಲ್ಲಿ ದಿನದ 24 ಗಂಟೆಯೂ ಕಾವಲುಗಾರರ ವ್ಯವಸ್ಥೆ ಇದೆ. ಸೌರ ಬೀದಿ ದೀಪ, ಆಕರ್ಷಕ ಭೌಗೋಳಿಕ ವಿನ್ಯಾಸ, ವಾಸ್ತು ಪ್ರಕಾರ ಪ್ರತಿ ನಿವೇಶನಕ್ಕೂ ಸಂಪರ್ಕ, 40 ಅಡಿ ಅಗಲದ ಕಾಂಕ್ರೀಟ್ ಮುಖ್ಯ ರಸ್ತೆ, 30 ಅಡಿ ಅಗಲದ ಒಳ ರಸ್ತೆ ನಿರ್ಮಿಸಲಾಗಿದೆ. ಮಳೆ ನೀರು ಸಂಗ್ರಹ, ನೀರು ಶುದ್ಧೀಕರಣ ಘಟಕ,ನೆಲದಡಿಯಲ್ಲಿ ಒಳಚರಂಡಿ ಕೊಳವೆ ಅಳವಡಿಸಲಾಗಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಡಿಯೋನ್ ಮೊಂತೆರೊ, ಪ್ರಧಾನ ವ್ಯವಸ್ಥಾಪಕಿ ಸುಮನಾ ಹಾಗೂ ಮಾರುಕಟ್ಟೆ ವ್ಯವಸ್ಥಾಪಕ ಜ್ಯುವೆಲ್ ಕ್ರಾಸ್ತಾ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!