![](https://vidyamaana.com/wp-content/uploads/2024/09/image_1.png.jpeg)
ಪುತ್ತೂರು; ಮಾಯ್ ದೆ ದೇವುಸ್ ಚರ್ಚ್ ಪುತ್ತೂರು ಇದರ ವತಿಯಿಂದ ಬದುಕಿನ ಹಬ್ಬವಾದ ಕ್ರಿಸ್‌ಮಸ್ ಪ್ರಯುಕ್ತ ಶಾಂತಿ ಸಂದೇಶ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ `ಬಂಧುತ್ವ ಕ್ರಿಸ್‌ಮಸ್’ ಡಿ.೨೫ರ ಸಂಜೆ ಗಂಟೆ ೫.೩೦ಕ್ಕೆ ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿ ನಡೆಯಲಿದೆ ಎಂದು ಧರ್ಮಗುರು ರೆ.ಫಾ.ಲಾರೆನ್ಸ್ ಮಸ್ಕರೇನಸ್ ತಿಳಿಸಿದ್ದಾರೆ.
![](https://vidyamaana.com/wp-content/uploads/2024/12/screenshot_20241224_204401_whatsapp8183805788711432943-1024x577.jpg)
![](https://vidyamaana.com/wp-content/uploads/2024/12/screenshot_20241224_191857_whatsapp2463333866091608096-761x1024.jpg)
ವಿಶಿಷ್ಟವಾಗಿ ಈ ಕಾರ್ಯಕ್ರಮ ಜೋಡಿಸಲಾಗಿದ್ದು, ಜನತೆಯ ನಡುವಿನ ಬಂಧುತ್ವ ವಿಸ್ತಾರತೆಯಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿವಿಧ ಧರ್ಮಗಳ ಮೂವರು ಬಂಧುತ್ವದ ಸಂದೇಶ ನೀಡಲಿದ್ದಾರೆ. ಖ್ಯಾತ ವಾಗ್ಮಿ ಕೆದಿಲದ ಶ್ರೀಕೃಷ್ಣ ಉಪಾಧ್ಯಾಯ, ಎಸ್‌ಕೆಎಸ್‌ಎಸ್‌ಎಫ್ ಈಸ್ಟ್ ಜಿಲ್ಲಾ ಉಪಾಧ್ಯಕ್ಷ ಬಹು. ಪಿ.ಎ. ಝಕರಿಯಾ ಆಸ್ಲಮಿ ಮರ್ಧಾಳ ಹಾಗೂ ಪೆರುವಾಯಿ ಫಾತಿಮಾ ಚರ್ಚ್ ಧರ್ಮಗುರು ವಂ.ಸೈಮನ್ ಡಿಸೋಜ ಅವರು ಈ ಸಂದೇಶಗಳನ್ನು ನಾಡಿನ ಜನತೆಗೆ ನೀಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ ಕೋಡಿಂಬಾಡಿ, ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ, ಪೌರಾಯುಕ್ತ ಮಧು ಎಸ್ ಮನೋಹರ್, ಡಿವೈಎಸ್ಪಿ ಅರುಣ್ ನಾಗೇಗೌಡ, ತಹಶೀಲ್ದಾರ್ ಪುರಂದರ ಹೆಗ್ಡೆ, ಪುತ್ತೂರು ಧರ್ಮಪ್ರಾಂತ್ಯದ ಶ್ರೇಷ್ಠಗುರು ಅತೀ.ವಂ. ಡಾ. ಎಲ್ದೋ ಪುತ್ತೆನ್ ಕಂಡತ್ತಿಲ್ ಕೋರ್-ಎಪಿಸ್ಕೋಪ, ಸುಧಾನ ವಿದ್ಯಾಸಂಸ್ಥೆಯ ಸಂಚಾಲಕ ವಂ. ವಿಜಯ ಹಾರ್ವಿನ್, ರೆಕ್ಟರ್ ಸಾನ್ ತೋಂ ಗುರುಮಂದಿರ ಪುತ್ತೂರು ವಂ.ಜೋಸೆಫ್ ಕೇಳಂಪರAಬಿಲ್,ಜಿ.ಎಲ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಬಲರಾಮ ಆಚಾರ್ಯ ಹಾಗೂ ಕೇಂದ್ರ ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಆಝಾದ್ ಅವರು ಗೌರವ ಉಪಸ್ಥಿತರಿರುತ್ತಾರೆ.