ಹುಬ್ಬಳ್ಳಿ, ಡಿಸೆಂಬರ್ 30: ಡಿ.22ರಂದು ಹುಬ್ಬಳ್ಳಿಯ ಅಚ್ಚವ್ವನ ಕಾಲೋನಿಯಲ್ಲಿ ನಡೆದಿದ್ದ ಸಿಲಿಂಡರ್ ಸ್ಫೋಟಗೊಂಡು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವನ್ನಪ್ಪಿದ್ದಾರೆ (death). ಆ ಮೂಲಕ ಮೃತಪಟ್ಟವರ ಸಂಖ್ಯೆ 7ಕ್ಕೇರಿಕೆ ಆಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ತೇಜಸ್ ಸತಾರೆ(26) ಕೊನೆಯುಸಿರೆಳೆದಿದ್ದಾರೆ. ಒಬ್ಬನೇ ಮಗನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಕನಸು ನನಸಾಗಿಯೇ ಉಳಿಯಿತು: ತಂದೆ ಕಣ್ಣೀರು

ಒಬ್ಬನೇ ಮಗನಾಗಿದ್ದ ತೇಜಸ್ನನ್ನು ಕಳೆದುಕೊಂಡು ತಂದೆ-ತಾಯಿ ಕಣ್ಣೀರು ಹಾಕಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಎಕ್ಸ್ ರೇ ಟೆಕ್ನಿಶಿಯನ್ ಆಗಿ ತೇಜಸ್ ತಂದೆ ಮುರಳಿಯವರು ಕೆಲಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ತೇಜಸ್ ಮಾಲೆ ಧರಿಸುತ್ತಿದ್ದರು. ಪುಣೆಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿ ಬಂದಿದ್ದರು. ತೇಜಸ್ ಹೋಟೆಲ್ ಮಾಡುವ ಕನಸು ಕಂಡಿದ್ದ. ಆ ಕನಸು ನನಸಾಗಿಯೇ ಉಳಿಯಿತು ಎಂದು ತಂದೆ ಮಾಧ್ಯಮ ಮುಂದೆ ನೋವು ತೋಡಿಕೊಂಡಿದ್ದಾರೆ

ಡಿಸೆಂಬರ್ 22 ರಂದು ಸಿಲಿಂಡರ್ ಸ್ಪೋಟದಿಂದ 9 ಜನ ಮಾಲಾಧಾರಿಗಳು ಗಂಭೀರ ಗಾಯಗೊಂಡಿದ್ದರು. ಹುಬ್ಬಳ್ಳಿಯ ಉಣಕಲ್ ಸಮೀಪ‌ ಇರುವ ಅಚ್ಚವ್ವನ ಕಾಲೋನಿಯಲ್ಲಿ ನಡೆದ ಘೋರ ದುರಂತದಲ್ಲಿ ತೇಜಸ್ ಸತಾರೆ ಸೇರಿದಂತೆ ಏಳು ಜನ‌ ಮಾಲಾಧಾರಿಗಳು ಉಸಿರು ಚೆಲ್ಲಿದ್ದಾರೆ. ಮೃತ 7 ಜನರ ಪೈಕಿ ಐದು ಜನ ತಂದೆ ತಾಯಿಗೆ ಒಬ್ಬರೇ ಮಕ್ಕಳು.

ಈವರೆಗೂ ನಿಜಲಿಂಗಪ್ಪ ಬೇಪುರಿ (58) ಸಂಜಯ್ ಸವದತ್ತಿ (19)ಲಿಂಗರಾಜ್ ಬೀರನೂರ (20) ರಾಜು ಮೋಗೇರಿ ( 16) ಶಂಕರ್ ಊರ್ಬಿ ( 30) ಹಾಗೂ ಮುಂಜುನಾಥ್ ವಾಗ್ಮೋಡೆ (18) ಮೃತರು. ಈ ಆರು ಜನರ ಪೈಕಿ ಐವರು ಒಬ್ಬರೇ ಮಕ್ಕಳು. ಮೃತ ಮಾಲಾಧಾರಿ ಶಂಕರ್ಗೆ ತಂದೆ ತಾಯಿ ಇಬ್ಬರೂ‌ ಇಲ್ಲ. ಇನ್ನು ಮೃತ ಮಾಲಾಧಾರಿಗಳಾದ ಲಿಂಗರಾಜ ಬೀರನೂರ, ಹಾಗೂ ರಾಜು ಮೂಗೇರಿ ಇಬ್ಬರು ತಂದೆಯನ್ನು ಕಳೆದುಕೊಂಡು‌ ಮನೆಗೆ ಆಸರೆಯಾಗಿದ್ದರು. ಈ ಎರಡು ಕುಟುಂಬಗಳು ಇಂದಿಗೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ‌.

ಇಬ್ಬರು ಮೃತಾರಗಿ ಇಂದಿಗೆ ನಾಲ್ಕು ದಿನ ಕಳೆದಿದೆ. ಆದರೆ ಮನೆಯಲ್ಲಿ ಕಣ್ಣೀರು ಮಾತ್ರ ನಿಂತಿಲ್ಲ. ಮೃತ ಲಿಂಗರಾಜ ತಾಯಿ ಕವಿತಾ ಹುಬ್ಬಳ್ಳಿಯ ಖಾಸಗಿ ಕಾಲೇಜ್ ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಗ‌ ಕೂಡ ಶಾಲೆ ಬಿಟ್ಟು ಅದೇ ಕಾಲೇಜ್ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಇಬ್ಬರು ದುಡಿದು‌ ಮನೆ ನೋಡಿಕೊಳ್ಳುತ್ತಿದ್ದರು. ಆದರೆ ಮನೆಗೆ ಆಧಾರವಾಗಿದ್ದ ಲಿಂಗರಾಜ್ ಸಿಲಿಂಡರ್ ಸ್ಪೋಟದಲ್ಲಿ ಪ್ರಾಣ ಬಿಟ್ಟಿದ್ದಾನೆ. ಹೀಗಾಗಿ ತಾಯಿ ಕವಿತಾ ಮಗನ‌ ನೆನಪಲ್ಲಿ ಕಣ್ಣೀರು ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!