
ಆಂಟಿ ಜೊತೆ ಲವ್‌ನಲ್ಲಿ ಬಿದ್ದಿದ್ದ ಯುವಕನೊಬ್ಬ ಇದೀಗ ಆಸ್ಪತ್ರೆ ಸೇರಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ
ಯುವಕನನ್ನು ಆನಂದ್ ಎಂದು ಗುರುತಿಸಲಾಗಿದೆ. ಗೋಕಾಕ್ನ ಸಂಗಮೇಶ್ವರದ ನಿವಾಸಿಯಾಗಿರುವ ಈತ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ.
ಆನಂದ್ ಗೋಕಾಕ್ನ ಆಂಟಿಯೊಬ್ಬಳನ್ನು ಲವ್ ಮಾಡುತ್ತಿದ್ದ.
ಪ್ರತಿನಿತ್ಯ ಫೋನಿನಲ್ಲಿ ಮಾತಾಡುತ್ತಿದ್ದ ಶೋಭಾ ಕಳೆದ 15 ದಿನಗಳಿಂದ ಫೋನ್ ಕರೆ ಸ್ವೀಕರಿಸಿರಲಿಲ್ಲವಂತೆ. ಇದರಿಂದ ಬೇಸರಗೊಂಡಿದ್ದ ಯುವಕ ನೇರವಾಗಿ ಾಕೆಯ ಮನೆಗೆ ಬಂದಿದ್ದಾನೆ. ಈ ವೇಳೆ ಗಂಡನ ಜೊತೆ ಶೋಭಾಳನ್ನ ನೋಡಿ ಕೆರಳಿದ ಆನಂದ್ ಚಾಕು ತೆಗೆದು ಆಕೆ ಕೈ ಮತ್ತು ಹಣೆಗೆ ಇರಿದಿದ್ದಾನೆ. ಇಷ್ಟಾಗ್ತಿದ್ದಂತೆ ಶೋಭಾ ಮತ್ತು ಆಕೆ ಪತಿ ಅವನ ಕೈಯಿಂದ ಚಾಕು ಕಸಿದುಕೊಂಡು ಆನಂದ್ನ ತಲೆ, ಹೊಟ್ಟೆ, ಎದೆಗೆ ಇರಿದಿದ್ದಾರೆ.
ಘಟನೆಯಲ್ಲಿ ಆನಂದ್, ಶೋಭಾ ಇಬ್ಬರಿಗೂ ಗಾಯವಾಗಿದ್ದು, ಬೆಳಗಾವಿಯ ಬಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಗ್ಗೆ ಗೋಕಾಕ್ ನಗರ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಿಸಿದ್ದಾರೆ.
ಈ ಹಿಂದೆ ಓರ್ವನನ್ನ ಮದುವೆಯಾಗಿ ಆತನಿಂದ ದೂರಾಗಿದ್ದ ಶೋಭಾ, ಮಂಜುನಾಥ್ ಎಂಬಾತನನ್ನ 2ನೇ ಮದುವೆ ಆಗಿದ್ದಳು. ಈ ನಡುವೆ ಕಳೆದ ಒಂದೂವರೆ ವರ್ಷದಿಂದ ಈ ಆನಂದ್ ಜೊತೆ ಲವ್ವಲ್ಲಿದ್ದಳು.






