ಮೊಟ್ಟೆ ಸೇವನೆಯಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಇದರಲ್ಲಿರುವ ಪೋಷಕಾಂಶದಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಹಾಗಾದರೆ ದಿನಕ್ಕೆ ಎಷ್ಟು ಮೊಟ್ಟೆ ತಿನ್ನುವುದು ಒಳ್ಳೆಯದು ಎಂಬುದು ನಿಮಗೆ ಗೊತ್ತೇ?ಪರಿಪೂರ್ಣ ಆಹಾರ ಮೊಟ್ಟೆಯನ್ನು ಮಕ್ಕಳು, ಹೃದಯರೋಗಿಗಳು ಸೇವಿಸುವುದು ಬಹಳ ಒಳ್ಳೆಯದು.

ದಿನಕ್ಕೆ ಒಂದು ಮೊಟ್ಟೆ ಸೇವಿಸಿದರೆ ಸಾಕು. ಆರೋಗ್ಯವಂತ ಪುರುಷರು ಮತ್ತು ಮಹಿಳೆಯರು ಒಂದಕ್ಕಿಂತ ಹೆಚ್ಚು ಮೊಟ್ಟೆ ಸೇವಿಸಬಹುದು. ಅದರೆ ಮಧುಮೇಹಿಗಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ದಿನಕ್ಕೆ ಒಂದು ಮೊಟ್ಟೆ ತಿಂದರೆ ಸಾಕು.

ಅಧ್ಯಯನವೊಂದರ ಪ್ರಕಾರ ದಿನಕ್ಕೆ ಒಂದು ಮೊಟ್ಟೆ ಸೇವಿಸಿದವರಲ್ಲಿ ಯಾವುದೇ ಆರೋಗ್ಯದ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ. ನೀವು ಪ್ರೊಟೀನ್ ಯುಕ್ತ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರೆ ದಿನಕ್ಕೆ ಮೂರು ಮೊಟ್ಟೆಗಳನ್ನು ಸೇವಿಸಿ. ಇದಕ್ಕಿಂತ ಹೆಚ್ಚಿನ ಪ್ರಮಾಣವನ್ನು ಸೇವಿಸುವವರಾದರೆ ವೈದ್ಯರ ಅನುಮತಿ ಪಡೆದುಕೊಳ್ಳುವುದು ಒಳ್ಳೆಯದು.

ಬೆಳೆಯುವ ಮಕ್ಕಳಿಗೆ ಮೊಟ್ಟೆಯಲ್ಲಿರುವ ಪ್ರೊಟೀನ್ ಬಹಳ ಮುಖ್ಯ ಎಂಬುದೇನೋ ನಿಜ. ಆದರೆ ಸಸ್ಯಾಹಾರಿಗಳಿಗೆ ಇದು ಕಡ್ಡಾಯವಲ್ಲ. ಇದರ ಬದಲು ಇತರ ಮೂಲಗಳಿಂದಲೂ ಆಯಾ ಪ್ರೊಟೀನ್ ಸಿಗುವಂತೆ ಮಾಡಬಹುದು. ಹಾಗಿದ್ದೂ ಮಕ್ಕಳಿಗೆ ಮೊಟ್ಟೆ ಕೊಡುವುದಾದರೆ ದಿನಕ್ಕೊಂದೇ ಮೊಟ್ಟೆ ಸಾಕು.

Leave a Reply

Your email address will not be published. Required fields are marked *

Join WhatsApp Group
error: Content is protected !!