ಖಲಿಸ್ತಾನಿ ಭಯೋತ್ಪಾದಕ ಗುರ್ಪತ್ವಂತ್ ಸಿಂಗ್ ಪನ್ನುನ್ ಅವರು ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗುವ ಮೂಲಕ ಕೆಲ ಕಾಲ ಆತಂಕ ಉಂಟು ಮಾಡಿದರು.
ಅಮೇರಿಕಾ ಸಂಯುಕ್ತ ಸಂಸ್ಥಾನದ 47 ನೇ ಅಧ್ಯಕ್ಷರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಖಲಿಸ್ತಾನಿ ಭಯೋತ್ಪಾದಕ ಪನ್ನುನ್ ಭಾಗವಹಿಸಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಟ್ರಂಪ್ ಪ್ರಮಾಣ ವಚನ ಸ್ವೀಕರಿಸಲು ಮತ್ತು ಅಮೆರಿಕದ 47 ನೇ ಅಧ್ಯಕ್ಷರಾಗಿ ಅವರ ಚೊಚ್ಚಲ ಭಾಷಣವನ್ನು ಕೇಳಲು ನೆರೆದಿದ್ದ ಪ್ರೇಕ್ಷಕರು ಒಂದೆಡೆ ಯುಎಸ್‌ಎ, ಯುಎಸ್‌ಎ ಎಂದು ಕೂಗುತ್ತಿದ್ದಾರೆ, ಇತ್ತ ಪನ್ನುನ್ ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶಕ್ಕೆ ಕಾರಣವಾಗಿದೆ.
ವರದಿಯ ಪ್ರಕಾರ, ಪನ್ನುನ್ ಗೆ ಯಾವುದೇ ರೀತಿಯ ಆಹ್ವಾನ ನೀಡಿಲ್ಲ, ಅದರ ಹೊರತಾಗಿ ಇದೀಗ ಭಯೋತ್ಪಾದಕ ಇಷ್ಟು ದೊಡ್ಡ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಭದ್ರತೆಯ ಲೋಪ ಎತ್ತಿ ತೋರಿಸುತ್ತಿದ್ದು, ಪನ್ನೂನ್‌ನ ಚಟುವಟಿಕೆಗಳು ಭಾರತೀಯ ಅಧಿಕಾರಿಗಳಿಗೆ ಕಳವಳ ಉಂಟಾಗಿದೆ.
ಸದ್ಯ ಈ ಬಗ್ಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಇದ್ದ ಸ್ಥಳದಲ್ಲಿಯೇ ಪನ್ನೂನ್ ಹಾಜರಿದ್ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನೆಟ್ಟಿಗರು, ಇಂತಹ ಉಗ್ರಗಾಮಿಯು ಅಂತಹ ಉನ್ನತ ಮಟ್ಟದ ಸಮಾರಂಭಕ್ಕೆ ಹೇಗೆ ಆಹ್ವಾನವನ್ನು ಪಡೆಯಬಹುದು? CIA ಅಥವಾ FBI ಮೌಲ್ಯಮಾಪನ ಮಾಡಲಿಲ್ಲವೇ ಎಂದು ಪ್ರಶ್ನಿಸಿದರು.