ಪುತ್ತೂರು: ಐತಿಹಾಸಿಕ ಹಿನ್ನಲೆಯ ಪ್ರತಿ ಮೂರು ವರ್ಷಕ್ಕೊಮ್ಮೆ ಜರಗುವ ಮುಕ್ವೆ ಮಖಾಂ ಉರೂಸ್ ಜ.೨೫ ರಂದು ರಾತ್ರಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಕಳೆದ ಜ.೧೯ರಿಂದ ಪ್ರಾರಂಭಗೊಂಡ ಈ ಉರೂಸ್ ಕಾರ್ಯಕ್ರಮದಲ್ಲಿ ನೂರೇ ಅಜ್ಮೀರ್ ಸಹಿತ ವಿವಿಧ ವಾಗ್ಮಿಗಳಿಂದ ಮತಪ್ರಭಾಷಣ ನಡೆಯಿತು. ಇಂದು ನಡೆಯಲಿರುವ ಉರೂಸ್ ಕಾರ್ಯಕ್ರಮವನ್ನು ಎಸ್‌ಕೆಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ರಫೀಕ್ ಹುದವಿ ಕೋಲಾರಿ ಉದ್ಘಾಟನೆ ನಡೆಸಲಿದ್ದಾರೆ. ಎಸ್‌ಕೆಎಸ್‌ಎಸ್‌ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಪ್ರಾಸ್ತಾವಿಕ ಪ್ರಭಾಷಣ ನಡೆಸಲಿದ್ದಾರೆ. ಖ್ಯಾತ ವಾಗ್ಮಿ ಹಾಫಿಲ್ ಸಮೀಸ್ ಹಾನ್ ನಾಫಿ ಇಡುಕ್ಕಿ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಕ್ವೆ ಮಸೀದಿ ಅಧ್ಯಕ್ಷರಾದ ಇಬ್ರಾಹಿಂ ಮುಲಾರ್ ವಹಿಸಲಿದ್ದಾರೆ.
ವಿಶೇಷ ಆಹ್ವಾನಿತರು
ಕರ್ನಾಟಕ ರಾಜ್ಯ ಸರ್ಕಾರದ ಸಭಾಪತಿ ಯು.ಟಿ.ಖಾದರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಬೆಂಗಳೂರು ಫಿಜಾ ಗ್ರೂಫ್ ನ ಬಿ.ಎಂ. ಫಾರೂಕ್, ಉದ್ಯಮಿ ಇನಾಯಿತ್ ಆಲಿ ಅವರು ಸೇರಿದಂತೆ ಅನೇಕ ಗಣ್ಯ ಅತಿಥಿಗಳು ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂದಲ್ ಮೆರವಣಿಗೆ-ಸಮಾರೋಪ
ಜ.೨೬ರಂದು ಉರೂಸ್ ಸಮಾರಂಭದ ಸಮಾರೋಪ ನಡೆಯಲಿದೆ. ಮಗ್ರಿಬ್ ನಾಮಾಜಿನ ಬಳಿಕ ಮುಕ್ವೆ ಜಮಾಅತ್ ನ ಅನಫಿ ಭಾಂದವರ ಆಕರ್ಷಕ ಸಂದಲ್ ಮೆರವಣಿಗೆ ನಡೆಯಲಿದೆ. ನಾಳೆ ಬೆಳಿಗ್ಗೆ ೯ ಗಂಟೆಗೆ ಖತಮುಲ್ ಖುರ್‌ಆನ್ ಕಾರ್ಯಕ್ರಮ ನಡೆಯಲಿದೆ. ಸಯ್ಯದ್ ಸಾದಾತ್ ತಂಞಳ್ ಗುರುವಾಯನಕೆರೆ ದುವಾ ಆಶೀರ್ವಾದ ನಿರ್ವಹಿಸಲಿದ್ದಾರೆ. ಸಯ್ಯದ್ ಜೆಫ್ರಿ ತಂಞಳ್ ಬೆಳ್ತಂಗಡಿ ಅವರು ಮುಖ್ಯ ಪ್ರಭಾಷಣ ನಡೆಸಿದ್ದಾರೆ. ಸಿರಾಜುದ್ದೀನ್ ಸಖಾಫಿ ಕನ್ಯಾನ ಅವರು ಪ್ರಾಸ್ತಾವಿಕ ಪ್ರಭಾಷಣ ನಡೆಸಲಿದ್ದಾರೆ. ಮಧ್ಯಾಹ್ನ ೧೨ ಗಂಟೆಯಿAದ ಸಾರ್ವಜನಿಕ ಅನ್ನದಾನ ನಡೆಯಲಿದೆ.
ದೀಪಗಳ ಅಲಂಕಾರ
ದೀಪಾಲAಕಾರದಿAದ ಕಂಗೊಳಿಸುತ್ತಿದೆ ಮುಕ್ವೆ ಪರಿಸರ. ಉರೂಸ್ ಸಮಾರಂಭಕ್ಕಾಗಿ ಮುಕ್ವೆ ಭಾಗದ ರಸ್ತೆ ಬದಿಗಳಲ್ಲಿ ದೀಪಗಳ ಅಲಂಕಾರ ಮಾಡಲಾಗಿದ್ದು, ನೋಡುಗರನ್ನು ಸೆಳೆಯುವ ದರ್ಗಾ ಮತ್ತು ಮಸೀದಿ ಅಲಂಕಾರದಿAದ ಕಂಗೊಳಿಸುತ್ತಿದೆ. ಇಲ್ಲಿಗೆ ಬರುವ ಮಂದಿಯನ್ನು ಈ ಆಕರ್ಷಕ ಅಲಂಕಾರ ಕೈಬೀಸಿ ಕರೆಯುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!