ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾಕುಂಭಮೇಳದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಭಾಗಿಯಾಗಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗರಾಜ್‌ದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇದುವರೆಗೆ 12ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆಜನವರಿ 13 ರಿಂದ ಆರಂಭವಾಗಿರುವ ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾಕುಂಭಮೇಳಕ್ಕೆ ದೇಶ ವಿದೇಶಗಳಿಂದ ಅಸಂಖ್ಯಾತ ಭಕ್ತರು, ಯಾತ್ರಾರ್ಥಿಗಳು ಹರಿದು ಬರುತ್ತಲೇ ಇದ್ದಾರೆ.

ವಿಶ್ವದ ಶ್ರೀಮಂತ ವ್ಯಕ್ತಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ರಾಜಕಾರಣಿಗಳು ಅಲ್ಲದೆ ಮಠಾಧೀಶರು, ಸಾಧು ಸಂತರು ಮಹಾಕುಂಭಮೇಳಕ್ಕೆ ಬರುತ್ತಲೇ ಇದ್ದಾರೆ.

ಹರಿಹರ ಪಂಚಮಸಾಲಿ ಪೀಠದ ವಚನಾಂದ ಸ್ವಾಮೀಜಿ, ಪೇಜಾವರ ಶ್ರೀಗಳು ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಇದೀ ಮಹಾಕುಂಭಮೇಳಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು

ಮಹಾಕುಂಭಮೇಳದಲ್ಲಿ ಭಾಗಿಯಾದ ಬರೆದುಕೊಂಡಿರುವ ಶ್ರೀಗಳು ಜೈ ಶ್ರೀ ಗುರುದೇವ
ಈ ಮಂಗಳಕರ ಶನಿವಾರದಂದು ಜನವರಿ 25, 2025 ರಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳ 2025 ರ ಭಾಗವಾಗಲು ನಾನು ನಿಜವಾಗಿಯೂ ಆಶೀರ್ವದಿಸಲ್ಪಟ್ಟಿದ್ದೇನೆ ಎಂದಿದ್ದಾರೆ.

ಮಹಾಕುಂಭಮೇಳದಲ್ಲಿ ಭಾಗಿಯಾಗಿರುವುದು ಇದು ಒಂದು ಸಾಟಿಯಿಲ್ಲದ ಆಧ್ಯಾತ್ಮಿಕ ಅನುಭವವಾಗಿದೆ ಎಂದಿದ್ದಾರೆ, ಮುಂದುವರಿದು ಪ್ರಯಾಗ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳವು.

ಮತ್ತು ಉತ್ತರ ಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿ ಮತ್ತು ಗೋರಖ್‌ಪುರದ ಗೋರಕ್ಷಾ ಮಠದ ಮಹಂತ್, ಯೋಗಿ ಆದಿತ್ಯನಾಥ್ ಜಿ ಅವರಿಂದ ಕೃಪಾಂಕವಾದ ನಾಥ ಯೋಗಿ ಪಂಥ್ ಮಹಾಸಭಾದಲ್ಲಿ ಭಾಗವಹಿಸಿರುವುದು ನನಗೆ ವಿಶೇಷವಾಗಿದೆ

ವಿವಿಧ ಮಠಗಳ ಸ್ವಾಮೀಜಿಗಳು ಮತ್ತು ಗಣ್ಯ ಗಣ್ಯರು, ಏಕತೆ ಮತ್ತು ಆಧ್ಯಾತ್ಮಿಕತೆಯ ಸಾರವನ್ನು ಆಚರಿಸಲು ಒಟ್ಟಿಗೆ ಸೇರುತ್ತಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ. ಇದೊಂದು ಪುಣ್ಯಕ್ಷೇತ್ರವಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!