
ಪುತ್ತೂರು; ಮೊದಲ ಬಾರಿಗೆ ತೀವ್ರ ಕುತೂಹಲ ಕೆರಳಿಸಿದ್ದ ಪುತ್ತೂರು ಟೌನ್ ಬ್ಯಾಂಕ್ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಭಾರತಿ ಜಯಭೇರಿ ಬಾರಿಸುವ ಮೂಲಕ ಬಂಡಾಯಕ್ಕೆ ಇಲ್ಲಿ ಆಸ್ಪದವಿಲ್ಲ ಎಂಬುವುದನ್ನು ಸಾಬೀತುಪಡಿಸಿದೆ.
ಟೌನ್‌ಬ್ಯಾಂಕ್ ನ ೫ ವರ್ಷಗಳ ನೂತನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಸಹಕಾರಭಾರತಿ ೧೨ ಸ್ಥಾನಗಳನ್ನು ಪಡೆದುಕೊಂಡು ಭರ್ಜರಿ ಗೆಲುವು ಸಾಧಿಸಿದೆ.
ಕಾಂಗ್ರೆಸ್ ಬೆಂಬಲಿಗರು ಹಾಗೂ ಓರ್ವ ಸ್ವತಂತ್ರ ಅಭ್ಯರ್ಥಿ ಈ ಬಾರಿ ಕಣದಲ್ಲಿದ್ದರು. ಆದರೆ ಸಹಕಾರಭಾರತಿಯ ಅಭ್ಯರ್ಥಿಗಳ ಮುಂದೆ ಗೆಲುವು ಕಾಣಲು ಸಾಧ್ಯವಾಗಿಲ್ಲ.
ಸಹಕಾರ ಭಾರತಿಯಿಂದ ಹಾಲಿ ಅಧ್ಯಕ್ಷ ಕಿಶೋರ್ ಕೊಳತ್ತಾಯ ಎನ್, ಚಂದ್ರಶೇಖರ ರಾವ್ ಬಪ್ಪಳಿಗೆ, ರಾಜು ಶೆಟ್ಟಿ, ರಾಮಚಂದ್ರ ಕಾಮತ್, ಶ್ರೀಧರ ಗೌಡ ಕೆ, ಶ್ರೀಧರ ಪಟ್ಲ, ಸುಜೀಂದ್ರ ಪ್ರಭು, ವೀಣಾ, ಸೀಮಾ ಎಂ.ಎ, ಗಣೇಶ್ ಕೌಕ್ರಾಡಿ, ಮಲ್ಲೇಶ್ ಕುಮಾರ್, ಕಿರಣ್ ಕುಮಾರ್ ರೈ ಅವರು ವಿಜಯಿಗಳಾಗಿದ್ದಾರೆ.
ಪುತ್ತೂರು ಟೌನ್‌ಬ್ಯಾಂಕ್‌ನ ಮುಂದಿನ ೫ ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಜ.೨೫ರಂದು ಚುನಾವಣೆ ನಡೆಯಿತು. ಆಡಳಿತ ಮಂಡಳಿಯ ಒಟ್ಟು ೧೩ ನಿರ್ದೇಶಕರ ಸ್ನಾನಗಳಲ್ಲಿ ಪರಿಶಿಷ್ಟ ಪಂಗಡ ಮೀಸಲಾದ ಒಂದು ಸ್ನಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ ೧೨ ಸ್ಥಾನಗಳಿಗೆ ಅಭ್ಯರ್ಥಿಗಳ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಒಟ್ಟು ೩,೬೦೩ ಮತದಾರರು ಮತ ಚಲಾವಣೆಯ ಅರ್ಹತೆ ಪಡೆದುಕೊಂಡಿದ್ದರೂ ಕೇವಲ ೧೮೦೦ ಮಂದಿ ಮಾತ್ರ ಮತಚಲಾವಣೆ ಮಾಡಿದ್ದರು. ಕಾಂಗ್ರೇಸ್ ಬೆಂಬಲಿತರಾಗಿ ಚಂದ್ರಶೇಖರ, ಜೋನ್ ಸಿರಿಲ್ ರೋಡ್ರಿಗಸ್, ನೇಮಾಕ್ಷ ಎಂ, ಮಹಮ್ಮದ್ ಅಶ್ರಫ್ ಕಲ್ಲೇಗ, ಸುದರ್ಶನ ಗೌಡ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಸದಾಶಿವ ಪೈ ಸಾಮಾನ್ಯ ಕ್ಷೇತ್ರದ ಸ್ಪರ್ಧಿಗಳಾಗಿದ್ದರು. ಮಹಿಳಾ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತೆ ಕೃಷ್ಣವೇಣಿ ಎಂ, ಪ.ಜಾತಿ ಮೀಸಲು ಕ್ಷೇತ್ರಕ್ಕೆ ಕಾಂಗ್ರೇಸ್ ಬೆಂಬಲಿತ ಶೀನಪ್ಪ ಎಂ, ಹಿಂದುಳಿದ ವರ್ಗ ಎ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ ರಂಜಿತ್ ಬಂಗೇರ ಕೆ, ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ ಸನತ್ ರೈ ಸ್ಪರ್ಧಿಸಿದ್ದರು. ಪರಿಶಿಷ್ಟ ಪಂಗಡದ ಮೀಸಲು ಸ್ಥಾನಕ್ಕೆ ಸಹಕಾರ ಭಾರತಿಯಿಂದ ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಬಿಜತ್ರೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.
