ಬಾಲಿವುಡ್, ಸ್ಯಾಂಡಲ್‌ವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾದ ಹಿನ್ನಲೆ ಗಾಯಕನಾಗಿ ಅತ್ಯಂತ ಜನಪ್ರಿಯವಾಗಿರುವ ಉದಿತ್ ನಾರಾಯಣ ಇದೀಗ ವಿವಾದಕ್ಕೆ ಸಿಲುಕಿದ್ದಾರೆ. ಅದ್ಭುತ ಕಂಠದಿಂದ ಜನರ ಮನಸ್ಸು ಗೆದ್ದಿರುವ ಉದಿತ್ ನಾರಾಯಣ್ ಇದೀಗ ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಈ ಘಟನೆ ನಡಿದಿದೆ.

ಟಿಪ್ ಟಿಪ್ ಬರ್ಸಾ ಪಾನಿ ಹಾಡುತ್ತಾ ಉದಿತ್ ನಾರಾಯಣ್ ಅಭಿಮಾನಿಗಳ ಬಳಿ ಬಂದಿದ್ದಾರೆ. ಈ ವೇಳೆ ಯುವತಿಯರು ಉದಿತ್ ನಾರಾಯಣ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರೆ. ಫೋಟೋ ಕ್ಲಿಕ್ಕಿಸಲು ಬಗ್ಗಿದ ಉದಿತ್ ನಾರಾಯಣ್ ಕೆನ್ನಗೆ ಮಹಿಳಾ ಅಭಿಮಾನಿ ಮುತ್ತಿಕ್ಕಿದ್ದಾರೆ. ಇತ್ತ ಉದಿತ್ ನಾರಾಯಣ್ ಇದೇ ಮಹಿಳಾ ಅಭಿಮಾನಿಯ ತುಟಿಗೆ ಮುತ್ತಿಕ್ಕಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಬಹಿರಂಗವಾಗಿದೆ.

ಬಾಲಿವುಡ್‌ನ ಜನಪ್ರಿಯ ರೋಮ್ಯಾಂಟಿಕ್ ಹಾಡು ಟಿಪ್ ಟಿಪ್ ಬರ್ಸಾ ಪಾನಿ ಹಾಡು ಹಾಡುತ್ತಿದ್ದಂತೆ ಮ್ಯೂಸಿಕ್ ಕಾರ್ಯಕ್ರಮದಲ್ಲಿದ್ದ ಸಂಗೀತ ಪ್ರೀಯರು ಭಾರಿ ಜೈಘೋಷ ಹಾಕಿದ್ದಾರೆ. ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ. ಹಾಡು ಹಾಡುತ್ತಿದ್ದ ಉದಿತ್ ನಾರಾಯಣ ವೇದಿಕೆ ತುದಿಗೆ ಆಗಮಿಸಿದ್ದಾರೆ. ಈ ವೇಳೆ ಮುಂಭಾಗದಲ್ಲಿದ್ದ ಮಹಿಳಾ ಅಭಿಮಾನಿಗಳು ಉದಿತ್ ನಾರಾಯಣ್ ಕೈಕುಲುಕಿ, ಸೆಲ್ಫಿ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದಾರೆ.

ಅಭಿಮಾನಿಗಳ ಬಯಕೆಗೆ ಸ್ಪಂದಿಸಿದ ಉದಿತ್ ನಾರಾಯಣ, ವೇದಿಕೆಯಲ್ಲೇ ಮೊಣಕಾಲು ಊರಿ ಬಾಗಿದ್ದಾರೆ. ಈ ಮೂಲಕ ಮಹಿಳಾ ಅಭಿಮಾನಿಗಳು ಸೆಲ್ಫಿ ಫೋಟೋದಲ್ಲಿ ಕಾಣಿಸುವಂತೆ ಬಗ್ಗಿದ್ದಾರೆ. ಈ ವೇಳೆ ಹಲವು ಮಹಿಳಾ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿದ್ದಾರೆ. ಇದೇ ವೇಳೆ ಆಗಮಿಸಿದ ಮತ್ತೊರ್ವ ಮಹಿಳಾ ಅಭಿಮಾನಿ ಉದಿತ್ ನಾರಾಯಣ್ ಜೊತೆ ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಉದಿತ್ ನಾರಾಯಣ್ ಯುವತಿಯ ಮುಖದ ಪಕ್ಕಕ್ಕೆ ತಲೆ ಬಾಗಿಸಿದ್ದರೆ. ಇದೇ ಅವಕಾಶವನ್ನು ಬಳಸಿಕೊಂಡ ಯುವತಿ ಉದಿತ್ ನಾರಾಯಣ ಕೆನ್ನೆಗೆ ಮುತ್ತಿಕ್ಕಿದ್ದಾರೆ. ಇತ್ತ ಉದಿತ್ ನಾರಾಯಣ್ ಪ್ರತ್ಯುತ್ತರವಾಗಿ ಯುವತಿ ತುಟಿಗೆ ಮುತ್ತಿಕ್ಕಿದ್ದಾರೆ.

ಫೋಟೋ ಕ್ಲಿಕ್ಕಿಸಿಲು ಬಂದ ಅಭಿಮಾನಿಗೆ ತುಟಿಗೆ ಮುತ್ತಿಕ್ಕಿದ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದೆ. ಈ ಕುರಿತು ಪರ ವಿರೋಧಗಳು ಹೆಚ್ಚಾಗಿದೆ. ಹಲವರು ಉದಿತ್ ನಾರಾಯಣ ಅಭಿಮಾನಿಗೆ ಮುತ್ತಿಕ್ಕಿರುವುದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದ್ದಾರೆ. ಅಭಿಮಾನಿ ಮೊದಲು ಉದಿತ್ ನಾರಾಯಣ್‌ಗೆ ಮುತ್ತಿಕ್ಕಿದ್ದಾರೆ. ಪ್ರತಿಯಾಗಿ ಉದಿತ್ ನಾರಾಯಣ ಮುತ್ತಿಕ್ಕಿದ್ದಾರೆ ಎಂದು ಸಮರ್ಥನೆ ನೀಡಿದ್ದಾರೆ. ಇದೇ ವೇಳೆ ತುಟಿಗೆ ಮುತ್ತಿಕ್ಕಿರುವುದು ಸರಿಯಲ್ಲ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.

ವಿವಾದ ಜೋರಾಗುತ್ತಿದ್ದಂತೆ ಖುದ್ದು ಉದಿತ್ ನಾರಾಯಣ ಸ್ಪಷ್ಟನೆ ನೀಡಿದ್ದಾರೆ. ಈ ಘಟನೆಯನ್ನು ಇಷ್ಟು ದೊಡ್ಡದು ಮಾಡುವ ಅಗತ್ಯವಿಲ್ಲ. ಅಭಿಮಾನಿಗಳು ತುಂಬಾ ಕ್ರೇಝಿ ಇರುತ್ತಾರೆ. ಹಲವು ಬಾರಿ ಅಭಿಮಾನಿಗಳು ಮುತ್ತಿಕ್ಕುತ್ತಾರೆ. ಪ್ರತಿಯಾಗಿ ನಾವು ಮುತ್ತಿಕ್ಕುತ್ತೇವೆ. ಇದರಲ್ಲಿ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ಕಾರ್ಯಕ್ರಮದಲ್ಲಿ ಬಾಡಿಗಾರ್ಡ್, ಭದ್ರತಾ ಸಿಬ್ಬಂದಿಗಳಿದ್ದರು. ಈ ವೇಳೆ ಅಭಿಮಾನಿಗಳ ಬಳಿ ಬಂದಾಗ ಅವರ ಉತ್ಸಾಹ ಹೆಚ್ಚಾಗಿದೆ. ಈ ವೇಳೆ ಅಭಿಮಾನಿಗಳು ಪ್ರೀತಿ ತೋರಿದ್ದಾರೆ. ವಿವಾದ ಸೃಷ್ಟಿಸಿದವರು ತಿಳಿದುಕೊಂಡಂತೆ ಇಲ್ಲ. ನಾವು ಡೀಸೆಂಟ್ ಜನ ಎಂದು

Leave a Reply

Your email address will not be published. Required fields are marked *

Join WhatsApp Group
error: Content is protected !!