ಪುತ್ತೂರು : ಪುತ್ತೂರು ಮಹತೋಭಾರ  ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಸ್‌ಪಿವೈಎಸ್‌ಎಸ್‌ ಯೋಗ ಸಮಿತಿಯ ಸಹಕಾರದಲ್ಲಿ ರಥಸಪ್ತಮಿಯ ಪ್ರಯುಕ್ತ ವಿಶೇಷ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಫೆ.04ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ವಿ.ಎಸ್.‌ ಭಟ್‌, ಕಾರ್ಯಕ್ರಮ ಸಂಚಾಲಕ ಭಾಸ್ಕರ್‌, ತಾಲೂಕು ಸಂಚಾಲಕರಾದ ಕೃಷ್ಣಾನಂದ, ಸಹಸಂಚಾಲಕಿ ಶ್ರೀಮತಿ ವೀಣಾ ಪದ್ಮನಾಭ್‌, ಪ್ರಮುಖರುಗಳಾದ ಪುಷ್ಪರಾಜ್, ಹರಿಪ್ರಸಾದ, ಸುದೇಶರವರು ಜತೆಯಾಗಿ ದೀಪಬೆಳಗಿಸುವ ಮೂಲಕ ನೆರವೇರಿಸಿದರು.

ಬೆಳಗ್ಗಿನ ಬ್ರಾಹ್ಮೀ ಮುಹೂರ್ತದಲ್ಲಿ 4.30ಕ್ಕೆ ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮ ಒಟ್ಟು 3 ಆವೃತ್ತಿಗಳಲ್ಲಿ 108 ಸುತ್ತು ಸೂರ್ಯ ನಮಸ್ಕಾರ ಸ್ತೋತ್ರ ಪಠಣದೊಂದಿಗೆ ನಡೆದು 6.30ಕ್ಕೆ  ಕಾರ್ಯಕ್ರಮ ಸಮಾಪನಗೊಂಡಿತು. ಕಾರ್ಯಕ್ರಮದಲ್ಲಿ ರಥಸಪ್ತಮಿಯ ಮಹತ್ವವನ್ನು ಬನ್ನೂರು ಶಾಖೆಯ ಕಾವ್ಯ  ಬೌದ್ಧಿಕ್‌ ನೀಡಿದರು..

ಸುಮಾರು 500ಕ್ಕೂ ಮಿಕ್ಕಿ ಸಂಖ್ಯೆಯಲ್ಲಿ ಸುಳ್ಯ, ಬೆಳಿಯೂರುಕಟ್ಟೆ ಹಾಗೂ ಪುತ್ತೂರು ತಾಲೂಕಿನ ಯೋಗಬಂಧುಗಳು ಭಾಗವಹಿಸಿದ್ದರು. ಶ್ರೀ ಕ್ಷೇತ್ರದ ರಥಬೀದಿಯಲ್ಲಿ ನೇರಸಾಲಿನೊಂದಿಗೆ ಶಿಸ್ತಿಬದ್ಧವಾಗಿ ಸೂರ್ಯನಮಸ್ಕಾರ ಮಾಡಲಾಯಿತು. ತಾಲೂಕು ಶಿಕ್ಷಣ ಪ್ರಮುಖರಾದ ವಸಂತ, ಸತೀಶರವರ ನೇತೃತ್ವದಲ್ಲಿ ಸೂರ್ಯನಮಸ್ಕಾರದ ಮಾರ್ಗದರ್ಶನ ನೀಡಿದರು.  ಪುತ್ತೂರಿನ  ವಿವಿಧ ಶಾಖೆಯ ಬಂಧುಗಳು ವೇದಿಕೆಯಲ್ಲಿ ಪ್ರಾತ್ಯಕ್ಷಿಕೆಯಲ್ಲಿ ಜೋಡಿಸಿಕೊಂಡರು. ಸಂಪ್ಯ ಶಾಖೆಯ ಶಿಲ್ಪಾ ಕಾರ್ಯಕ್ರಮ ನಿರೂಪಣೆಗೈದು, ಮಹಾಲಿಂಗೇಶ್ವರ ಶಾಖೆಯ ಪ್ರಸನ್ನ ಸ್ವಾಗತಿಸಿ, ಕಾರ್ಯಕ್ರಮ ಸಂಚಾಲಕ ಭಾಸ್ಕರ್‌ ವಂದನಾರ್ಪಣೆಗೈದರು.
ಪ್ರಾಂತ ಸಂಘಟನಾ ಪ್ರಮುಖರಾದ ಹರೀಶ್‌ ಕೋಟ್ಯಾನ್‌, ಜಿಲ್ಲಾ ಸಂಚಾಲಕ ನಾರಾಯಣ ಪಾವಂಜೆ, ಪ್ರಾಂತ ಪ್ರಮುಖರು ಶಿವಾನಂದ ರೈ, ಜಿಲ್ಲಾ ಪ್ರಮುಖರಾದ ಸುಬ್ರಹ್ಮಣ್ಯ ಭಟ್‌ ಮತ್ತಿತರ ಜಿಲ್ಲಾ ಪ್ರಮುಖರು ಭಾಗವಹಿಸಿದ್ದರು. ಯೋಗ ವೀಕ್ಷಿಸಲೆಂದು ಸ್ಥಳೀಯ ಯೋಗಾಸಕ್ತರು ಸಹ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!