
ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ʼಇನ್ವೆಸ್ಟ್ ಕರ್ನಾಟಕʼ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ನಾಯಕರು ಭಾಗಿಯಾಗಿದ್ದರು.
ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲು ನೋವಿನ ಕಾರಣ ವ್ಹೀಲ್ ಚೇರ್‌ನಲ್ಲೇ ಆಗಮಿಸಿದ್ದರು.
ಸಿದ್ದರಾಮಯ್ಯನವರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ಇದೇ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಾಜ್‌ನಾಥ್ ಸಿಂಗ್ ಸಿದ್ದರಾಮಯ್ಯನವರನ್ನು ಭೇಟಿಯಾದಾಗ ನಡೆದುಕೊಂಡ ರೀತಿಗೂ ಸಹ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ರಾಜ್‌ನಾಥ್ ಸಿಂಗ್ ಅವರು ಬರುತ್ತಿದ್ದನ್ನು ಕಂಡ ಸಿದ್ದರಾಮಯ್ಯ ಮೇಲೇಳಲು ಯತ್ನಿಸಿದ್ದಾರೆ. ಇದನ್ನು ಕಂಡ ಕೂಡಲೇ ರಾಜ್‌ನಾಥ್ ಸಿಂಗ್ ಸಿದ್ದರಾಮಯ್ಯ ಅವರನ್ನು ಮೇಲೇಳದಂತೆ ತಡೆದು ಚೇರ್ ಮೇಲೆಯೇ ಕೂರಿಸಿ ಮಾತನ್ನಾಡಿಸಿದ್ದಾರೆ.
