
ಉಪ್ಪಿನಂಗಡಿ :ಇಲ್ಲಿನ ರಾಷ್ಟ್ರೀಯ ಹೆದ್ದಾರಿ 75ರ, ಹೋಟೆಲ್ ಆದಿತ್ಯ ಬಳಿ ಸೂರ್ಯಂಬೈಲ್ ಸಂಕೀರ್ಣದಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡಿರುವ ಸೂರ್ಯ ಆಸ್ಪತ್ರೆಯ ಉದ್ಟಾಟನೆ ಫೆ. 17ರಂದು ನಡೆಯಲಿದೆ’ ಎಂದು ಆಸ್ಪತ್ರೆಯ ಪ್ರಧಾನ ವೈದ್ಯ ರಾಜೇಶ್ ಎಸ್.ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಡಾ. ಎಂ. ಶಾಂತಾರಾಮ ಶೆಟ್ಟಿ ಆಸ್ಪತ್ರೆಯನ್ನು ಲೋಕಾರ್ಪಣಾ ಮಾಡಲಿದ್ದಾರೆ. ಉಪ್ಪಿನಂಗಡಿಯ ಸೂರ್ಯಂಬೈಲು ಫಾರ್ಮ್ಸ್ ಮಾಲೀಕ ಶಾಂತಾರಾಮ ಎಸ್. ಮತ್ತು ಶಶಿಮಂಗಲ ದಂಪತಿ ದೀಪ ಬೆಳಗುವರು. ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್, ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಭಾಗವಹಿಸುವರು ಎಂದರು.
