ರಾ ಜ್ಯದ ಕಾನೂನು ಹಾಗೂ ಸುವ್ಯವಸ್ಥೆಯಲ್ಲಿ ಗುಪ್ತಚರ ಇಲಾಖೆಯು ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಇದೀಗ ಗುಪ್ತಚರ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಗುಪ್ತಚರ ಇಲಾಖೆಯು ಮಾಹಿತಿಯನ್ನು ಸಂಗ್ರಹಿಸಲು ಹಾಗೂ ವಿವಿಧ ರಾಜ್ಯಗಳಲ್ಲಿ ಪ್ರವಾಸ ಮಾಡುವಾಗ ಸಮಸ್ಯೆ ಆಗುತ್ತಿರುವುದರಿಂದ ಈ ಬದಲಾವಣೆ ಮಾಡಲು ನಿರ್ಧರಿಸಿರುವುದಾಗಿ ರಾಜ್ಯ ಸರ್ಕಾರವು ಹೇಳಿದೆ.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುಸವ್ಯವಸ್ಥೆಯಲ್ಲಿ ಲೋಪವಾಗುತ್ತಿದೆ ಎನ್ನುವ ಆರೋಪಗಳ ನಡುವೆಯೇ ಗುಪ್ತ ವಾರ್ತೆ ಇಲಾಖೆಯಲ್ಲಿ ಮೇಜರ್‌ ಸರ್ಜರಿ ಶುರುವಾಗಿದೆ. ಏನೆಲ್ಲಾ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎನ್ನುವ ವಿವರ ಇಲ್ಲಿದೆ.

ಕರ್ನಾಟಕ ಸರ್ಕಾರವು ಗುಪ್ತಚರ ಇಲಾಖೆಯಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ರಾಜ್ಯದ ಗುಪ್ತಚರ ಇಲಾಖೆಯಲ್ಲಿ ಇದೀಗ ಕೆಲವೊಂದು ನಿರ್ದಿಷ್ಟ ಸಮಸ್ಯೆಗಳು ಇವೆ. ಆ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಗುಪ್ತಚರ ಇಲಾಖೆಯಲ್ಲಿ ಈಗ ಇರುವ ಕೆಲವೊಂದು ಸಮಸ್ಯೆಗಳು

* ಸಾರ್ವಜನಿಕ ವಲಯದಲ್ಲಿ ಮಾಹಿತಿ ಕಲೆ ಹಾಕುವ ಸಮಯದಲ್ಲಿ ಪೊಲೀಸ್ ಸಿಬ್ಬಂದಿಗೆ / ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ತಮ್ಮ ಗುರುತಿನ ಚೀಟಿ ತೋರಿಸಿದ ಮೇಲೂ ಕೆಲವು ಸಾರ್ವಜನಿಕರು

ಸಹಕರಿಸುತ್ತಿಲ್ಲ. ಅಲ್ಲದೆ ಮುಂಚೆಯೇ ನಿಖರವಾದ ಮಾಹಿತಿ ಸಂಗ್ರಹಿಸಲು ಕಷ್ಟಕರವಾಗುತ್ತಿದೆ. ಪರಿಚಿತವಲ್ಲದ ಹೆಸರು ಹುದ್ದೆಯಿಂದ ನಿಖರವಾಗಿ ಮಾಹಿತಿ ನೀಡಲು ಹಿಂಜರಿಯುತ್ತಿದ್ದಾರೆ ಎಂದು ಹೇಳಲಾಗಿದೆ.

* ವಿವಿಧ ಪ್ರಕರಣಗಳ ಮಾಹಿತಿಗಳನ್ನು ಸಂಗ್ರಹಿಸಲು ನಗರ/ ಜಿಲ್ಲೆಗಳಲ್ಲಿರುವ ಪೊಲೀಸ್ ಠಾಣೆಗಳಿಗೆ ಅಧಿಕಾರಿ ಸಿಬ್ಬಂದಿ ತೆರಳಿದಾಗ ಹಾಲಿ ಇರುವ ಹೆಸರುಗಳಿಂದ ಮಾಹಿತಿ ಕಲೆ ಹಾಕುವುದಕ್ಕೆ ಕಷ್ಟವಾಗುತ್ತಿದೆ.

* ನಿತ್ಯ ಕರ್ತವ್ಯದಲ್ಲಿ ಮಾಹಿತಿ ಕಲೆಹಾಕುವುದಕ್ಕೆ ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿದ ಸಮಯದಲ್ಲಿ, ವಿಧಾನಸೌಧ/ವಿಕಾಸಸೌಧ ಪ್ರವೇಶ ದ್ವಾರದಲ್ಲಿ ಹಾಗೂ ಏರ್‌ಪೋರ್ಟ್‌ಗಳಲ್ಲಿ ಆಗಮನ/ನಿರ್ಗಮನ ಸಮಯದಲ್ಲಿ ಹಾಗೂ ಇತರೆ ಮುಖ್ಯ ಸ್ಥಳದಲ್ಲಿ ರಾಜ್ಯ ಗುಪ್ತವಾರ್ತೆ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಗುರುತಿನ ಚೀಟಿಯಲ್ಲಿ ಪೊಲೀಸ್ ಇಲಾಖೆಯ ಹೆಸರು ಇಲ್ಲದೇ ಇರುವುದರಿಂದ ಪರಿಚಯ ಮಾಡಿಕೊಳ್ಳಲು ಕಷ್ಟವಾಗುತ್ತಿದೆ.

ಸರ್ಕಾರಿ ಕರ್ತವ್ಯಕ್ಕಾಗಿ ಹೆದ್ದಾರಿಗಳಲ್ಲಿ ಸಂಚರಿಸುವಾಗ ಹಾಲಿ ನೀಡಿರುವ ಗುರುತಿನ ಚೀಟಿಗಳನ್ನು ಟೋಲ್‌ಗಳಲ್ಲಿ ಪರಿಗಣಿಸುತ್ತಿಲ್ಲ. ಇದರಿಂದಾಗಿ ಕೆಳಹಂತದ ಅಧಿಕಾರಿಗಳು ಸರ್ಕಾರಿ ಕರ್ತವ್ಯದ ನಿಮಿತ್ತ ತೆರಳಿದಾಗ ಟೋಲ್‌ಗಳಲ್ಲಿ ವೈಯುಕ್ತಿಕವಾಗಿ ಹಣವನ್ನು ಪಾವತಿಸಿ ಹೋಗಬೇಕಾದ ಅನಿವಾರ್ಯತೆ ಇದೆ.

* ವಿವಿಧ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸುವ ವೇಳೆ ಈ ಹಿಂದೆ ಇದ್ದ ಹುದ್ದೆಯ ಹೆಸರು / ಪದನಾಮದಿಂದ ಹೆಸರುಗಳನ್ನು ಹೇಳಿದಾಗ ಸುಲಭವಾಗಿ ಮಾಹಿತಿಗಳು ಸಿಗುತ್ತಿದ್ದವು. ಆದರೆ ಪ್ರಸ್ತುತ ಇರುವ ಹುದ್ದೆಯ ಹೆಸರುಗಳನ್ನು ಹೇಳಿದಾಗ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಅವುಗಳ ಪರಿಚಯವೇ ಇಲ್ಲದೆ ಮಾಹಿತಿ ಕೆಲ ಹಾಕುವುದಕ್ಕೆ ಆಗುತ್ತಿಲ್ಲ ಎನ್ನಲಾಗಿದೆ.

* ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯು ಪೊಲೀಸ್ ಇಲಾಖೆಯ ಅಧೀನದಲ್ಲಿ ಇರದೆ ಪ್ರತ್ಯೇಕವಾದ ಸಂಸ್ಥೆಯಾಗಿದೆ. ಆದರೆ ರಾಜ್ಯ ಗುಪ್ತಚರ ಘಟಕವು ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಪಟ್ಟ ಪೊಲೀಸ್ ಇಲಾಖೆಯ ಒಂದು ಭಾಗವಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳೇಗುಪ್ತವಾರ್ತೆ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಅವರನ್ನು ಪ್ರತ್ಯೇಕ ಹೆಸರುಗಳಿಂದ ಗುರುತಿಸಿದಲ್ಲಿ ಸರ್ಕಾರಿ ಕೆಲಸಕ್ಕೆ ಕಷ್ಟವಾಗುತ್ತಿದೆ.

* ರಾಜ್ಯದಲ್ಲಿ ಗಣ್ಯ ಮತ್ತು ಅತೀಗಣ್ಯ ವ್ಯಕ್ತಿಗಳು ಭೇಟಿ ನೀಡಿದ ಬಂದೋಬಸ್ತ್ ಸಮಯದಲ್ಲಿ ಹಾಗೂ ಎ.ಎಸ್.ಎಲ್ (Advance Security Liasioning) ಮಾಡುವ ಸಂದರ್ಭದಲ್ಲಿ ಹಾಗೂ ಎ.ಎಸ್.ಸಿ ತಂಡ ತಪಾಸಣೆ ಸಂದರ್ಭದಲ್ಲಿ ಪ್ರಸ್ತುತ ಇರುವ ಪದನಾಮದಿಂದ ಪೊಲೀಸ್ ಅಧಿಕಾರಿ/ಸಿಬ್ಬಂದಿ ಎಂದು ಗುರುತಿಸಲು ತೊಂದರೆ ಉಂಟಾಗುತ್ತಿದೆ ಎಂದು ಹೇಳಲಾಗಿದೆ. ಇಷ್ಟೆಲ್ಲ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಹೆಸರು ಬದಲಾವಣೆ: ಗುಪ್ತಚರ ಇಲಾಖೆಯಲ್ಲಿ ಈ ಹಿಂದೆ ಇದ್ದ ಹೆಸರುಗಳಿಂದ ಸುಲಭವಾಗಿ ಕೆಲಸಗಳು ಆಗುತ್ತಿತ್ತು. ಇದೀಗ ಹಳೇಯ ಮಾದರಿಯನ್ನೇ ಅನುಸರಿಸಿ. ಹಳೆಯ ಹೆಸರುಗಳನ್ನೇ ಮುಂದುವರಿಸುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಒಂದು ರೀತಿ ಗುಪ್ತಚರ ಇಲಾಖೆಗೆ ಮೇಜರ್‌ ಸರ್ಜರಿಯಾಗಿದ್ದು. ಹಳೆಯ ಮಾದರಿ ಮಾಹಿತಿ ಸಂಗ್ರಹಿಸಲು ನೆರವಾಗಲಿದೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!